ಸುದ್ದಿ 

ಅಪಘಾತದ ನಾಟಕವಾಡಿ ₹50,000 ಸುಲಿಗೆ: ಕಾರು ಸುತ್ತುವರಿದು ಬೆದರಿಸಿದ ಘಟನೆ ಬೆಂಗಳೂರು ತಿಲಕ್ ನಗರದಲ್ಲಿ ನಡೆದಿದೆ.

Taluknewsmedia.com

ಬೆಂಗಳೂರು, ಜೂನ್ 18, 2025: ನಗರದ ಬನ್ನೇರುಘಟ್ಟ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ಕಾರು ಚಾಲಕನೊಬ್ಬರನ್ನು ಅಪಘಾತದ ನೆಪದಲ್ಲಿ ರಸ್ತೆಯ ಮಧ್ಯೆ ತಡೆದು ನಿಲ್ಲಿಸಲ್ಪಟ್ಟು, ಅಪರಿಚಿತರ ಗುಂಪೊಂದು ಕಾರು ಸುತ್ತುವರಿದು ಬೆದರಿಕೆ ಹಾಕಿ ₹50,000 ಹಣವನ್ನು ಕ್ಯೂಆರ್ ಕೋಡ್‌ ಮೂಲಕ ಬಲವಂತವಾಗಿ ಪಡೆದಿದ್ದಾರೆ. ಇಂತಹ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಸನ್ನ ಕುಮಾರ್ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ದಿನಾಂಕ 02/06/2025 ರಂದು ಸಂಜೆ 5:00 ಗಂಟೆಯ ಸುಮಾರಿಗೆ ತಮ್ಮ ಕಾರಿನಲ್ಲಿ ಬನ್ನೇರುಘಟ್ಟ ರಸ್ತೆಯ ಕಚೇರಿಯಿಂದ ಮನೆಗೆ ಹೋಗುತ್ತಿದ್ದರು. ತಿಲಕ್ ನಗರದ ಈಸ್ಟ್ ಎಂಡ್ ಮುಖ್ಯರಸ್ತೆಯ ಕೆಫೆ ಕೃಷ್ಣಂ ಬಳಿ ರಸ್ತೆ ಬದಿಯಿಂದ ಅಸಾಧಾರಣ ರೀತಿಯಲ್ಲಿ ಬರುತ್ತಿದ್ದ ಒಂದು ವಾಹನ ಪ್ರಸನ್ನ ರವರ ಕಾರಿನ ಹಿಂದಿನ ಚಕ್ರಕ್ಕೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿದರು.ಅತಂತ್ರ ಸ್ಥಿತಿಯಲ್ಲಿ ಪ್ರಸನ್ನ ರವರು ಏನಾಗುತ್ತಿದೆ ಎಂದು ನೋಡುತ್ತಿದ್ದ ಹಾಗೆಯೆ ತಕ್ಷಣವೇ ಕೆಲವರು ಅವರ ಕಾರನ್ನು ಸುತ್ತುವರಿದು ಬಾಗಿಲು ತಟ್ಟಿ ಬಲವಂತವಾಗಿ ತೆರೆಯುವಂತೆ ಒತ್ತಾಯಿಸಿದರು. ಭೀತಿಗೊಂಡ ಪ್ರಸನ್ನ ರವರು ಕಾರಿನ ಬಾಗಿಲು ತೆರೆದಾಗ ಕೆಲ ವ್ಯಕ್ತಿಗಳು ಕಾರಿನಲ್ಲಿ ಪ್ರವೇಶಿಸಿ, ಭಯ ಉಂಟುಮಾಡುವಂತೆ ಶಾರೀರಿಕ ಹಾಗೂ ಮಾತಿನ ಮೂಲಕ ಬೆದರಿಕೆ ಹಾಕಿದರು.ಅಪಘಾತಕ್ಕೆ ಪರಿಹಾರವಾಗಿ , ಕ್ಯೂಆರ್ ಕೋಡ್ ಮೂಲಕ ತಕ್ಷಣವೇ ₹50,000 ಹಣವನ್ನು ಪಾವತಿಸುವಂತೆ ಒತ್ತಾಯಿಸಿ ಬಲವಂತವಾಗಿ ಹಣ ವರ್ಗಾಯಿಸಿಕೊಳ್ಳಲಾಯಿತು. ಪ್ರಸನ್ನ ರವರು ತಮ್ಮ ಜೀವದ ಭೀತಿಯಿಂದ ಹಣವನ್ನು ಪಾವತಿಸಿದ್ದು, ನಂತರ ಈ ಕುರಿತಂತೆ ತಿಲಕ್ ನಗರದ ಪೊಲೀಸರಿಗೆ ದೂರು ನೀಡಿದ್ದಾರೆ.ಘಟನೆಯ ಕುರಿತು ತನಿಖೆ ಕೈಗೊಂಡಿರುವ ತಿಲಕ್ ನಗರ ಪೊಲೀಸರು, ಈ ಕೃತ್ಯವು ಪೂರ್ವನಿಯೋಜಿತವಾಗಿ ನಡೆದ ಸುಲಿಗೆ ದಂಧೆಯ ಭಾಗವಾಗಿರುವ ಸಾಧ್ಯತೆ ಇರುವುದಾಗಿ ಶಂಕಿಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದಾರೆ.

Related posts