ಸುದ್ದಿ 

ಮನೆಗೆ ನುಗ್ಗಿದ ಅಪರಿಚಿತರು – ₹70,000 ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳ್ಳತನ…

Taluknewsmedia.com

ಬೆಂಗಳೂರು, ಜೂನ್ 21: ನಗರದಲ್ಲಿ ಮತ್ತೊಂದು ಮನೆಯ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಜೂನ್ 18ರಂದು ಬೆಳಗ್ಗೆ ಸುಮಾರು 8:00 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತರು ಮನೆಗೆ ನುಗ್ಗಿ ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡಿದ್ದಾರೆ. ಮಹೇಶ್ವರಿ ಘೋಶ್ ರವರು ನೀಡಿದ ದೂರಿನ ಪ್ರಕಾರ, ಅವರು ಮನೆಯ ಬಾಗಿಲು ತೆರೆದು ಒಳಗಡೆ ಇದ್ದಾಗ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಒಳನುಗ್ಗಿ, ಮಹೇಶ್ವರಿ ಘೋಶ್ ಕೆಲಸಮಾಡುವ ಕಂಪನಿಗೆ ಸೇರಿದ ಒಂದು LENOVO-20SL ಲ್ಯಾಪ್‌ಟಾಪ್ (ಮೌಲ್ಯ ರೂ. 50,000), ಲ್ಯಾಪ್‌ಟಾಪ್ ಬ್ಯಾಗ್, ಚಾರ್ಜರ್, ಮೌಸ್, MOTO G-62 ಮೊಬೈಲ್ ಫೋನ್ (ಮೌಲ್ಯ ರೂ. 18,000), ಮೂರು ವೈಯಕ್ತಿಕ ಡೈರಿಗಳು ಮತ್ತು ಕಂಪನಿಗೆ ಸೇರಿದ ದಾಖಲೆಗಳನ್ನು ಕಳುವು ಮಾಡಿದ್ದಾರೆ.ಒಟ್ಟು ಕಳುವಾದ ವಸ್ತುಗಳ ಮೌಲ್ಯವನ್ನು ಅಂದಾಜು ರೂ. 70,000 ಎಂದು ನಿರ್ಧರಿಸಲಾಗಿದೆ. ಘಟನೆಯ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪರಿಚಿತ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.

Related posts