ಬನ್ನೇರಘಟ್ಟ ರಸ್ತೆಯ ಮೋಟಾರ್ ಪಾರ್ಟ್ಸ್ ಗೋಡೌನ್‌ನಲ್ಲಿ ಕಳ್ಳತನ : ಲಕ್ಷಾಂತರ ಮೌಲ್ಯದ ವಸ್ತುಗಳು ಕಳುವು.
ಬೆಂಗಳೂರು, ಜೂನ್ 21 – ನಗರದ ಬನ್ನೇರಘಟ್ಟ ಮುಖ್ಯರಸ್ತೆಯ ಬಸವನಪುರದಲ್ಲಿರುವ ಟಿ-ಜಾನ್ ಕಾಲೇಜ್ ಹತ್ತಿರದ ಮೋಟಾರ್ ಪಾರ್ಟ್ಸ್ ಗೋಡೌನ್‌ನಲ್ಲಿ ಕಳ್ಳತನ ನಡೆದಿದ್ದು, ಸುಮಾರು ₹2.25 ಲಕ್ಷ ಮೌಲ್ಯದ ಪರಿಕರಗಳು ಕಳುವಾಗಿವೆ. ಈ ಕುರಿತು ಗೋಡೌನ್ ಮಾಲೀಕರು ಹುಳಿಮಾವು ಪೊಲೀಸರಿಗೆ ದೂರು ನೀಡಿದ್ದಾರೆ. ಹಜ್ವಲ್ ಪಾಶ ಬಿನ್ ಸಾಬುಲಾಲ (58), ಲಾಲ್ಜೀ ನಗರ, ಲಕ್ಕಸಂದ್ರ ನಿವಾಸಿ, ಅವರು ತಮ್ಮ ಕುಟುಂಬದೊಂದಿಗೆ ವಾಸವಿದ್ದು, ಜೀವನೋಪಾಯಕ್ಕಾಗಿ ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿ ಸ್ಕ್ರಾಪ್ ಮೋಟಾರ್ ಪಾರ್ಟ್ಸ್ ಎಂಬ ಹೆಸರಿನಲ್ಲಿ ಗೋಡೌನ್ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು.ಹಜ್ವಲ್ ಪಾಶ ಬಿನ್ ಸಾಬುಲಾಲ್ ರವರ ಪ್ರಕಾರ, 15/06/2025 ರಂದು ಸಂಜೆ 7:30 ಗಂಟೆಗೆ ಅವರು ತಮ್ಮ ಗೋಡೌನ್ ಅನ್ನು ಮುಚ್ಚಿ ಮನೆಗೆ ಹೋದರು. ಆದರೆ 16/06/2025 ರಂದು ಸಂಜೆ 5:00 ಗಂಟೆಗೆ ಅವರು ಪುನಃ ಗೋಡೌನ್‌ಗೆ ಹೋದಾಗ, ಅಲ್ಲಿ ಸಂಗ್ರಹಿಸಿದ್ದ ಕಾಪರ್ ಹಾಗೂ ಬ್ರಾಸ್ ಐಟಂಗಳು, ಕಾಪರ್ ವೈಯರ್‌ಗಳು ಮತ್ತು ವಾಹನಗಳ ರೇಡಿಯೇಟರ್‌ಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.ಅಂದಾಜು ₹2,25,000 ಮೌಲ್ಯದ ಈ ವಸ್ತುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಕುರಿತು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆ ಸಹ ಪ್ರಾರಂಭವಾಗಿದೆ.ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಯಾವುದೇ ಮಾಹಿತಿ ಲಭಿಸಿದರೆ ತಕ್ಷಣವೇ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.

