ಸುದ್ದಿ 

ಸ್ನ್ಯಾಕ್ಸ್ ತರಲು ಹೋಗಿ ನಾಪತ್ತೆಯಾದ ಯುವಕ : ಕುಟುಂಬಸ್ಥರು ಚಿಂತಾಗ್ರಸ್ತರಾಗಿದ್ದಾರೆ.

Taluknewsmedia.com

ಬೆಂಗಳೂರು, ಜೂನ್ 22: ನಗರದ ನಿವಾಸಿ 26 ವರ್ಷದ ಯುವಕ ವರುಣ್ ಕುಮಾರ್ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ವರುಣ್ ಅವರ ಅಕ್ಕ ನಾದ ನಯನರವರ ಪ್ರಕಾರ, ವರುಣ್ ಕುಮಾರ್ ಅವರು ದಿನಾಂಕ 17-06-2025 ರಂದು ಮದ್ಯಾಹ್ನ ಸುಮಾರು 2:30 ಗಂಟೆಗೆ “ಸ್ನ್ಯಾಕ್ಸ್ ತೆಗೆದುಕೊಂಡು 5 ನಿಮಿಷದಲ್ಲಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೋದ ವರುಣ್ ಅವರು ಇದುವರೆಗೆ ಮನೆಗೆ ವಾಪಸ್ ಬಂದಿಲ್ಲ.ಅನೇಕ ಬಾರಿ ನಯನ ಅವರು ವರುಣ್ ಮೊಬೈಲ್ ನಂಬರ್‌ಗೆ ಸಂಪರ್ಕಿಸಲು ಯತ್ನಿಸಿದರೂ, ಅವರು ಕರೆ ಸ್ವೀಕರಿಸುತ್ತಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ವಿಚಾರಣೆ ಮಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ವರುಣ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ನಯನ ಠಾಣೆಗೆ ದೂರು ದಾಖಲಿಸಿದ್ದಾರೆ. ಮೈಕೊ ಬಡಾವಣೆಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಕ್ರಮ ಆರಂಭಿಸಿದೆ.ವರುಣ್ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Related posts