ಸಿಟಿ ಮಾರ್ಕೆಟ್ನಲ್ಲಿ ತಂಬಾಕು ಮಾರಾಟದ ನಿಯಮ ಉಲ್ಲಂಘನೆ : ಪೊಲೀಸ್ ದಾಳಿ.
ಬೆಂಗಳೂರು, ಜೂನ್ 21:ನಗರದ ಹೃದಯಭಾಗವಾದ ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ನಿಯಮಿತ ಎಚ್ಚರಿಕೆ ಸೂಚನೆಗಳು ಇಲ್ಲದ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಅಂಗಡಿಯ ಮೇಲೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಈ ಕುರಿತು ಪೊಲೀಸ್ ಕಾನ್ಸ್ಟೇಬಲ್ ಮಧು ಬಿ ಜೆ (ಪಿಸಿ-20531) ಅವರು ನೀಡಿರುವ ವರದಿ ಪ್ರಕಾರ, ಅವರು ಕಳೆದ ನಾಲ್ಕು ವರ್ಷಗಳಿಂದ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಜೂನ್ 18 ರಂದು ಬೆಳಿಗ್ಗೆ 08:00 ಗಂಟೆಗೆ ಕರ್ತವ್ಯಕ್ಕೆ ಹಾಜರಾದರು. ನಂತರ ಠಾಣಾ ಇನ್ಚಾರ್ಜ್ ಎಸ್ಎಚ್ಓ ಅವರ ಆದೇಶದಂತೆ ಗುಪ್ತಚರ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟರು.ಮಧ್ಯಾಹ್ನ ಸುಮಾರು 3:40ರ ವೇಳೆಗೆ ಅವರು ಓ.ಟಿ. ಪೇಟೆ ರಸ್ತೆಯಲ್ಲಿ ಗಸ್ತು ಹೊಡೆದು ಸಾಗುತ್ತಿದ್ದಾಗ, ಬಾತ್ಮೀದಾರರಿಂದ ಮಾಹಿತಿ ಬಂದಿದ್ದು, ಓ.ಟಿ ಪೇಟೆ ಕ್ರಾಸ್ನಲ್ಲಿ ಸ್ಥಿತವಿರುವ ಎಸ್.ಎಲ್.ಎನ್ ಮಾರ್ಕೆಟ್ನ ನಂ.06, “ಕಲ್ಕತ್ತಾ ಪಾನ್ ಸ್ಟೋರ್ಸ್” ಎಂಬ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು 1ನೇ ಮಹಡಿಯ ಗೋಡನ್ನಲ್ಲಿ ಸಂಗ್ರಹಿಸಿ, ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು.ಅವರಿಂದ ಲಭಿಸಿದ ಮಾಹಿತಿಯ ಮೇರೆಗೆ 3:45ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ತಂಬಾಕು ಉತ್ಪನ್ನಗಳ ಮೇಲೆ ಮಾನ್ಯ ಭಾರತ ಸರ್ಕಾರದ ನಿಯಮದಂತೆ ಇರುವ “Specified Health Warning” ಎಂಬ ಕಡ್ಡಾಯ ಎಚ್ಚರಿಕೆ ಲೇಬಲ್ ಪ್ರದರ್ಶನವಿಲ್ಲದಿರುವುದು ಕಂಡುಬಂದಿತು.ಇದನ್ನು ಸರ್ಕಾರದ ಆದೇಶ ಮತ್ತು “ಕೊಟ್ಟಾ ಕಾಯ್ದೆ”ಯ ಉಲ್ಲಂಘನೆ ಎಂದು ಪರಿಗಣಿಸಿ, ದೋಷಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮಧು ಬಿ ಜೆ ಅವರು ಸ್ಥಳದಲ್ಲಿಯೇ ವರದಿ ಸಂಗ್ರಹಿಸಿ ಕಾನೂನು ಪ್ರಕ್ರಿಯೆಗೆ ಮುಂದಾಗಿದ್ದಾರೆ.ಪೊಲೀಸರು ಇದೀಗ ಅಂಗಡಿಯ ಮಾಲೀಕರಿಂದ ಸ್ಪಷ್ಟನೆ ಕೇಳಿದ್ದು, ಮುಂದಿನ ತನಿಖೆಯ ನಂತರ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

