ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ: ಪಳನಿಸ್ವಾಮಿ ವಿರುದ್ಧ ಕಾನೂನು ಕ್ರಮ
ನಾಗಮಂಗಲ, ಜೂನ್ 19, 2025 : ನಾಗಮಂಗಲ ಪಟ್ಟಣದ ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡಿದ ಪ್ರಕರಣವೊಂದರಲ್ಲಿ ಪಳನಿಸ್ವಾಮಿ ಎಂಬಾತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 19-06-2025 ರಂದು ಸಂಜೆ 4 ಗಂಟೆ ಸುಮಾರಿಗೆ ಕೆ. ಮಲೆನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ತೊಡಗಿದ್ದ ಪೊಲೀಸರು ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದರು. ಮಾಹಿತಿ ಪ್ರಕಾರ, ಪಳನಿಸ್ವಾಮಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದನು.ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಪಂಚರ ತಂಡದವರ ಮುಡಿಯಲ್ಲಿ, ಇಬ್ಬರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದನ್ನು ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಕೂಡಲೇ ಅವರಿಬ್ಬರು ಪರಾರಿಯಾಗಿದ್ದಾರೆ.
ಅಂಗಡಿಯೊಳಗಿದ್ದ ಪಳನಿಸ್ವಾಮಿಗೆ ವಿಚಾರಣೆ ನಡೆಸಿದಾಗ, ಆತ ಅಂಗಡಿಯ ವ್ಯವಹಾರಕ್ಕಾಗಿ ಈ ರೀತಿಯ ಅವಕಾಶ ನೀಡುತ್ತಿದ್ದೇನೆ ಎಂದು ಒಪ್ಪಿಕೊಂಡನು.ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ರಾಜ ವಿಸ್ಕಿ 90ML ತ್ಯಾಜ್ಯ ಮತ್ತು ಭರಿತ ಪ್ಯಾಕೆಟ್‌ಗಳು, ಮತ್ತು ಪ್ಲಾಸ್ಟಿಕ್ ಲೋಟಗಳು ಪತ್ತೆಯಾದವು. ಈ ಕುರಿತಂತೆ ಪಳನಿಸ್ವಾಮಿ ಬಿನ್ ಲೇಟ್ ಚಿನ್ನಸ್ವಾಮಿ (ವಯಸ್ಸು 59, ಬೋವಿ ಜನಾಂಗ, ನಿವಾಸಿ ಬಸವೇಶ್ವರನಗರ, ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕು) ವಿರುದ್ಧ ಕರ್ನಾಟಕ ಎಕ್ಸೈಸ್ ಕಾಯ್ದೆಯ ಸೆಕ್ಷನ್ 15(ಎ), 32(3) ಅನ್ವಯ ಪ್ರಕರಣ ದಾಖಲಿಸಲಾಗಿದೆ.ಸುದ್ದಿ ದೃಢಪಡಿಸಿದ ನಾಗಮಂಗಲ ಟೌನ್ ಠಾಣೆಯ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ವರದಿ :ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್ 9481838703

