ಸುದ್ದಿ 

ನಾಗಮಂಗಲ : ಕಳಪೆ ಕಾಮಗಾರಿ ಆರೋಪ.. ಸಂಬಂಧಪಟ್ಟವರ ಗಮನಕ್ಕೆ..! ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ – ನಾಗಮಂಗಲ.

Taluknewsmedia.com

Taluknewsmedia.com– ಕಳಪೆ ಕಾಮಗಾರಿ ಆರೋಪ.. ಸಂಬಂಧಪಟ್ಟವರ ಗಮನಕ್ಕೆ..!ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ – ನಾಗಮಂಗಲ..ಕಾಮಗಾರಿ ಹೆಸರು:ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಲಕ್ಕೇಗೌಡನ ಕೊಪ್ಪಲು ನಿಂದ ದೊಂದೇಮಾದಾಹಳ್ಳಿ ಮಾರ್ಗವಾಗಿ ಕೊಂಬಿನ ಕೊಪ್ಪಲಿಗೆ ಹೋಗುವ ರಸ್ತೆ ಅಭಿವೃದ್ಧಿ.- ಗುತ್ತಿಗೆದಾರರು.. ಶ್ರೀ ಶಂಭು ಕನ್ಸ್ಟ್ರಕ್ಷನ್. ಶ್ರೀ ಬಿ ಆರ್ ರಾಮಚಂದ್ರ. 1 ದರ್ಜೆ ಗುತ್ತಿಗೆದಾರರು.

ಮುಂದೆ ಓದಿ..
ಸುದ್ದಿ 

ರಾಮನಗರ: ತಾಲ್ಲೂಕಿನ ಕುಂಬಾಪುರ ಕಾಲೊನಿ ಸುತ್ತಮುತ್ತ ಆನೆ ದಾಳಿ ನಿರಂತರವಾಗಿದ್ದು, ತೋಟಗಳಿಗೆ ಓಡಾಡುವುದೇ ಕಷ್ಟವಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

Taluknewsmedia.com

Taluknewsmedia.comರಾಮನಗರ: ತಾಲ್ಲೂಕಿನ ಕುಂಬಾಪುರ ಕಾಲೊನಿ ಸುತ್ತಮುತ್ತ ಆನೆ ದಾಳಿ ನಿರಂತರವಾಗಿದ್ದು, ತೋಟಗಳಿಗೆ ಓಡಾಡುವುದೇ ಕಷ್ಟವಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ. ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಈ ಗ್ರಾಮವಿದೆ. ಬಾಳೆ, ತೆಂಗು ಮುಂತಾದ ತೋಟಗಳಿವೆ. ಕಳೆದ 20 ದಿನಗಳಿಂದ ಆನೆಗಳ ದಾಳಿ ನಿರಂತರವಾಗಿದೆ. ಬಾಳೆ ತೋಟದಲ್ಲಿ ಅಳವಡಿಸಿದ್ದ ನೀರಾವರಿ ಪೈಪ್ ಲೈನ್‍ಗಳನ್ನು ಆನೆಗಳು ಕಿತ್ತೆಸೆದಿವೆ. ಬೆಳೆದು ನಿಂತ ಬಾಳೆಗಿಡಗಳನ್ನು ಕಿತ್ತು ಹಾಕಿವೆ. ತೆಂಗಿನ ಮರಗಳನ್ನು ಉರುಳಿಸಿವೆ ಎಂದು ಸ್ಥಳೀಯರಾದ ರಾಮಚಂದ್ರ ಎಂಬುವರು ದೂರಿದರು. ಆನೆಗಳನ್ನು ಕಾಡಿಗೆ ಕಳುಹಿಸಿರುವುದಾಗಿ ಅರಣ್ಯ ಇಲಾಖೆಯವರು ಹೇಳುತ್ತಾರೆ. ಆದರೆ ಹಗಲು ಹೊತ್ತಿನಲ್ಲೇ ನಮ್ಮ ಕಾಲೊನಿ ಸುತ್ತಮುತ್ತ ಆನೆಗಳು ಓಡಾಡಿಕೊಂಡಿವೆ.ಹೀಗಾಗಿ ಮನೆಯಿಂದ ಹೊರಗೆ ಬರಲು ಹೆದರುವಂತೆ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಆನೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. -ಶಾಂತಕುಮಾರ್, ರಾಮನಗರ ತಾಲೂಕು ನ್ಯೂಸ್

ಮುಂದೆ ಓದಿ..
ಸುದ್ದಿ 

ಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಗುಣಮಟ್ಟದ ಊಟ.. ಹೇಳೋರಿಲ್ಲಾ .. ಕೇಳೋರಿಲ್ಲ..?

Taluknewsmedia.com

Taluknewsmedia.comಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಗುಣಮಟ್ಟದ ಊಟ.. ಹೇಳೋರಿಲ್ಲಾ .. ಕೇಳೋರಿಲ್ಲ..? ನಾಗಮಂಗಲ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಇರುವ ಇಂದಿರಾ ಕ್ಯಾಂಟೀನ್ ನಲ್ಲಿ ರುಚಿ ಇಲ್ಲದ ಕಳಪೆ ಗುಣಮಟ್ಟದ ಊಟ ನೀಡುತ್ತಿರುವುದಾಗಿ ಅವರು ನೀಡುವ ಊಟ ತಿನ್ನೋಕೆ ಆಗದೇ ಇರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗುತ್ತಿದ್ದು ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ತಾಲ್ಲೂಕು ತಹಶೀಲ್ದಾರ್ ರವರು ತಕ್ಷಣ ಪರಿಶೀಲನೆ ಕೈಗೊಂಡು ಕ್ರಮವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ..ಕೋವಿಡ್ ವಿಶೇಷ ಎಂದೇ ಸರ್ಕಾರ ಇಂದಿರಾ ಕ್ಯಾಂಟೀನ್ ಮೂಲಕ ಊಟ ಸಿಗುವಂತೆ ವ್ಯವಸ್ಥೆ ಮಾಡಿದ್ದು.. ಅದಕ್ಕೆಂದೇ ಹೆಚ್ಚು ಮೊತ್ತ ನೀಡುತ್ತಿರುವುದಾಗಿ ತಿಳಿದು ಬಂದಿದ್ದು ಈ ಅವ್ಯವಸ್ಥೆಯನ್ನು ಸಂಬಂದಿತರು ಶೀಘ್ರ ಸರಿಪಡಿಸಬೇಕಿದೆ ..

ಮುಂದೆ ಓದಿ..

ಕನ್ನಡ ಹಿರಿಯ ಚಲನಚಿತ್ರ ನಟಿ ದಿವಂಗತ ಬಿ ಜಯಾ ಅವರ ಅಂತ್ಯ ಸಂಸ್ಕಾರ…

Taluknewsmedia.com

Taluknewsmedia.com ಕನ್ನಡ ಹಿರಿಯ ಚಲನಚಿತ್ರ ನಟಿ ದಿವಂಗತ ಬಿ ಜಯಾ ಅವರ ಅಂತ್ಯ ಸಂಸ್ಕಾರ..ಶ್ರೀ ಬಿ ಜೆಡ್ ಜಮೀರ್ ಅಹಮದ್ ಖಾನ್ ಕೊರೋನಾ ವಾರಿಯರ್ಸ್ ತಂಡದಿಂದ.. ಹಿಂದೂ ಸಂಸ್ಕೃತಿ ವಿಧಿ-ವಿಧಾನಗಳ ಪ್ರಕಾರ, ಗೌರವ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಿದರು. ಚಾಮರಾಜಪೇಟೆಯ ಶಾಸಕರಾದ ಶ್ರೀ ಬಿ ಜೆಡ್ ಜಮೀರ್ ಅಹಮದ್ ಖಾನ್ ಅವರ ಆಪ್ತಕರು ಶ್ರೀ ಆಯೂಬ್ ಪಾಷ ಹಾಗೂ ನಮ್ಮ ಚಾಮರಾಜಪೇಟೆ ಕ್ಷೇತ್ರದ ಸಮಾಜ ಸೇವೆಕರಾದ ಎಂ ವಿನಾಯಕ ರವರು ಹಾಗೂ ಮುಖಂಡರು ನೇತೃತ್ವವಹಿಸಿದರು.

ಮುಂದೆ ಓದಿ..
ಸುದ್ದಿ 

ಜಿಲ್ಲಾ ಕ್ರೀಡಾಂಗಣ ಹತ್ತಿರ ಮಕ್ಕಳು ಬಿಸಾಡಿದ ಎಳನೀರಿನ ಕಾಯಿ ತಿನ್ನುವುದನ್ನು ಸೋಶಿಯಲ್ ಮೀಡಿಯಾ ದಲ್ಲಿ ನೋಡಿದ..

Taluknewsmedia.com

Taluknewsmedia.comಜಿಲ್ಲಾ ಕ್ರೀಡಾಂಗಣ ಹತ್ತಿರ ಮಕ್ಕಳು ಬಿಸಾಡಿದ ಎಳನೀರಿನ ಕಾಯಿ ತಿನ್ನುವುದನ್ನು ಸೋಶಿಯಲ್ ಮೀಡಿಯಾ ದಲ್ಲಿ ನೋಡಿದ ಇವರು ಯಾರು ಹಸಿವಿನಿಂದ ಇರಬಾರದು ಅಂತ ರೋಟರಿ ಸಿಲ್ಕ್ ಸಿಟಿ ಈ ಸೇವೆ ಆರಂಭಿಸಿದ್ದಾರೆ. ಶಾಂತಕುಮಾರ ಎಂ ಆರ್. ರಾಮನಗರ ತಾಲೂಕ ನ್ಯೂಸ್

ಮುಂದೆ ಓದಿ..
ವಿಶೇಷ 

ಸುದ್ದಿಯ ಮೂಲಗಳು,……

Taluknewsmedia.com

Taluknewsmedia.comಸುದ್ದಿಯ ಮೂಲಗಳು,…… ಜನರನ್ನು ರಂಜಿಸಲು ಆ ಮೂಲಗಳ ಮೂಲಕವೇ ವಂಚಿಸುತ್ತಿರುವ ಮಾಧ್ಯಮಗಳು,ಜನರ ಚಿಂತನಾ ಶೈಲಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕೆಟ್ಟ ಸುದ್ದಿಗಳ ಪ್ರಾಮುಖ್ಯತೆ……. ನಿನ್ನೆ ನಡೆದ ಒಂದು ಘಟನೆಯನ್ನು ಇದಕ್ಕೆ ಉದಾಹರಣೆ ನೀಡುತ್ತಿದ್ದೇನೆ. ಎಂದಿನಂತೆ ನಿನ್ನೆ ಬೆಳಗಿನ ದಿನ ಪತ್ರಿಕೆಯನ್ನು ಸುಮಾರು 6/30 ರಲ್ಲಿ ಓದಿದೆ. ಕೊಲೆ ಆರೋಪದಲ್ಲಿ ಸಿಬಿಐ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಕಾಂಗ್ರೆಸ್ ನ ವಿನಯ್ ಕುಲಕರ್ಣಿ, ಮೈಸೂರು ಭಾಗದ ಒಬ್ಬ ಪ್ರಭಾವಿ ವ್ಯಕ್ತಿಯ ಮೂಲಕ ದೆಹಲಿಯಲ್ಲಿ ಬೀಡು ಬಿಟ್ಟು ಬಿಜೆಪಿ ಸೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಬೆಳಗಿನ 9 ಗಂಟೆಯ ಸಮಯದಲ್ಲಿ ಒಂದು ಖಾಸಗಿ ಟಿವಿ ವಾಹಿನಿ ಇಡೀ ರಾಜ್ಯವೇ ಆಶ್ಚರ್ಯ ಪಡುವ ಬಹುದೊಡ್ಡ ಬ್ರೇಕಿಂಗ್ ಸುದ್ದಿ ನಮ್ಮ ಚಾನಲ್ ನೀಡುತ್ತಿದೆ. ಯಾರೂ ಊಹಿಸದ ಬೆಳವಣಿಗೆ ಎಂದು ಸ್ವಲ್ಪ ಸಮಯ ಸಂಗೀತದ ‌ಬಿಲ್ಡಪ್ ಕೊಟ್ಟು ಕೊನೆಗೆ ಪತ್ರಿಕೆಯಲ್ಲಿ…

ಮುಂದೆ ಓದಿ..

ರೈತರ ಬೆಳೆ ನಷ್ಟವಾಗಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಆಗಿರುವ ಬೆಳೆ ನಷ್ಟವನ್ನು ಸಂಬಂಧಿಸಿದ…

Taluknewsmedia.com

Taluknewsmedia.comಟಿ. ನರಸೀಪುರ: ರೈತರ ಬೆಳೆ ನಷ್ಟವಾಗಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಆಗಿರುವ ಬೆಳೆ ನಷ್ಟವನ್ನು ಸಂಬಂಧಿಸಿದ ಕಬಿನಿ ಇಲಖೆಯಿಂದಲೇ ಭರಿಸಿಕೊಡಬೇಕೆಂದು ದಸಂಸ (ಅಂಬೇಡ್ಕರ್ ವಾದ)ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಶಾಸಕರ ಮೂಲಕ ಮನವಿಪತ್ರ ಕೊಡುವುದರೊಂದಿಗೆ ಒತ್ತಾಯಿಸಿದರು. ಬನ್ನಹಳ್ಳಿ ಹುಂಡಿ ಏತ ನೀರಾವರಿ ಯೋಜನೆಯ ಯಂತ್ರೋಪಕರಣಗಳನ್ನು ದುರಸ್ಥಿಗೊಳಿಸಿ ರೈತರಿಗೆ ನೀರುಕೊಡದೆ ಬೆಳೆ ಹಾನಿಗೆ ಕಾರಣರಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಂಡು ಬೆಳೆ ನಷ್ಟ ಭರಿಸುವಂತೆ ಒತ್ತಾಯಿಸಿ ಪಟ್ಟಣದ ಕಬಿನಿ ನೀರಾವರಿ ಕಛೇರಿಯ ಮುಂಭಾಗ ದಸಂಸ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ. ಅಶ್ವಿನ್‍ಕುಮಾರ್ ಆಗಮಿಸಿ ಅವರ ಅಹವಾಲವನ್ನು ಸ್ವೀಕರಿಸಿ ಕಾರ್ಯಪಾಲಕ ಅಭಿಯಂತರ ಮಹೇಶ್‍ರವರನ್ನು ಈ ಬಗ್ಗೆ ಸಮಜಾಯಿಸಿ ಕೇಳಿದಾಗ ಬನ್ನಹಳ್ಳಿಹುಂಡಿ ಏತ ನೀರಾವರಿಯಿಂದ ನೀರು ಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಪಿಲಾ ನದಿ ಪ್ರವಾಹ ಬಂದಾಗ ಯಂತ್ರಗಳಿಗಿಳಿದು ಕೆಟ್ಟುಹೋಗಿದ್ದವು. ಇದರಿಂದಾಗಿ…

ಮುಂದೆ ಓದಿ..

ರಸ್ತೆ ದುರಸ್ತಿಗಾಗಿ ಬುಡರಕಟ್ಟಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ.

Taluknewsmedia.com

Taluknewsmedia.comಬೈಲಹೊಂಗಲ : ರಸ್ತೆ ದುರಸ್ತಿಗಾಗಿ ಬುಡರಕಟ್ಟಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ. ಬೆಳವಡಿ ಇಂದ ಬುಡರಕಟ್ಟಿ ಮಾರ್ಗವಾಗಿ ಧಾರವಾಡಕ್ಕೆ ಹೋಗುವ ರಾಜ್ಯ ಹೆದ್ದಾರಿ ತುಂಬಾ ಹದಗೆಟ್ಟಿದ್ದು, ಈ ರಸ್ತೆ ದುರಸ್ತಿಗಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಗ್ರಾಮಸ್ಥರು ರಸ್ತೆಯ ಮಧ್ಯ ವಾಹನಗಳನ್ನು ತಡೆದು ರಸ್ತೆಯ ಮಧ್ಯ ಬಿದ್ದಿರುವ ಗುಂಡಿಗಳಲ್ಲಿ ಸಸಿ ನೆಡುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ಯನ್ನು ಮಾಡಿದರು. ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸತತ ಮೂರುಗಂಟೆಗಳ ಕಾಲ ರಸ್ತೆ ತಡೆಯಿಂದಾಗಿ ಸುಮಾರು ಒಂದು ಕಿಲೋಮೀಟರ್ ವರೆಗೆ ವಾಹನಗಳು ಸಾಲುಗಟ್ಟಿದ್ದವು. ನಂತರ ಸ್ಥಳಕ್ಕೆ ಆಗಮಿಸಿದ ಲೋಕಪಯೋಗಿ ಇಲಾಖೆಯ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿ ಶೀಘ್ರದಲ್ಲಿ ರಸ್ತೆಯನ್ನು ದುರಸ್ತಿ ಮಾಡಿಕೊಡಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ್ ಮಂಗಳಗಟ್ಟಿ, ನಾಗರಾಜ್ ಸವಟಗಿ, ಕಲ್ಲಯ್ಯ ಹುಗ್ಗಿ, ದ್ಯಾಮನಗೌಡ ಪಾಟಿಲ್, ಷಣ್ಮುಖ ತೋಟಗಿ, ವಿನಾಯಕ್ ಕುಲಕರ್ಣಿ,…

ಮುಂದೆ ಓದಿ..