ನಾಗಮಂಗಲ ಸರ್ಕಾರಿ ಕಾಲೇಜಿನಲ್ಲಿ ಹಲ್ಲೆ ಘಟನೆ: ಉಪಾಧ್ಯಕ್ಷನಿಗೆ ಜೀವ ಬೆದರಿಕೆ!
ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ Colleges Development Committee (CDC) ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವವರು ಹಲ್ಲೆಗೊಳಗಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ತಮ್ಮ ಕರ್ತವ್ಯ ನಿಮಿತ್ತ ಪ್ರಾಂಶುಪಾಲರನ್ನು ಭೇಟಿ ಮಾಡಲು ಕಾಲೇಜಿಗೆ ಆಗಮಿಸಿದ ವೇಳೆ, ಇಬ್ಬರು ಉಪನ್ಯಾಸಕರಿಂದ ಹಲ್ಲೆ ಹಾಗೂ ಜೀವ ಬೆದರಿಕೆ ಎದುರಾದ ಘಟನೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪಿರ್ಯಾದಿದಾರರ ಹೇಳಿಕೆ ಪ್ರಕಾರ, ಇಂಗ್ಲಿಷ್ ಉಪನ್ಯಾಸಕ ಸುರೇಶ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ಅವರು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅವರನ್ನು ನಿಂದನೆ ಮಾಡಿ, ಶಾರೀರಿಕವಾಗಿ ಗುದ್ದಿ ನೋವುಂಟುಮಾಡಿದ್ದಾರೆ. ಘಟನೆ ವೇಳೆ ಸ್ಥಳಕ್ಕೆ ಬಂದ ವೆಂಕಟೇಶ ಎಂಬವರು ಗಲಾಟೆ ತಪ್ಪಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.”ಮತ್ತೆ ಕಾಲೇಜಿಗೆ ಬಂದರೆ ಕೊಲೆಮಾಡುತ್ತೇವೆ” ಎಂಬ life threat ಕೂಡ ಆರೋಪಿಗಳಿಂದ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.ಸ್ಥಳೀಯವಾಗಿ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಿಕ್ಷಣ ಸಂಸ್ಥೆಗಳೊಳಗಿನ ಶಾಂತಿ ವಾತಾವರಣವನ್ನು ಕಾಪಾಡಬೇಕೆಂಬ ಒತ್ತಡ ಹೆಚ್ಚಾಗಿದೆ. ಮುಂದಿನ ಕ್ರಮಕ್ಕೆ ಎಲ್ಲರ ಗಮನ ಸೆಳೆಯಲಾಗಿದೆ.
ವರದಿ :ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

