ಸುದ್ದಿ 

ಹಟ್ನ ಗ್ರಾಮದಲ್ಲಿ ಅಕ್ರಮ ಮದ್ಯ ವಿತರಣೆ : ಆರೋಪಿತನಿಂದ ಮದ್ಯ ಹಾಗೂ ಲೋಟ ವಶ

Taluknewsmedia.com

ಹಟ್ನ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಬೆಳ್ಳೂರು ಠಾಣೆಯ ಪೊಲೀಸರು ದಾಳಿ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಿನಾಂಕ 19/06/2025 ರಂದು ಸಂಜೆ 04:30 ಗಂಟೆಗೆ ಈ ದಾಳಿ ನಡೆಯಿತು.ಪಿಎಸ್‌ಐ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಕಾಶ್ (CP-679), ಕಾಂತ (CP-254), ರಮೇಶ್ (CP-490) ಹಾಗೂ ಇಬ್ಬರು ಪಂಚಾಯತ್ ಸದಸ್ಯರು ಪಾಲ್ಗೊಂಡರು. ದಾಳಿ ವೇಳೆ ಹಟ್ನ ಗೇಟ್ ಬಳಿಯ ಕ್ಯಾಂಡಿಮೆಂಟ್ಸ್ ಅಂಗಡಿಯಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಲೋಟಗಳಲ್ಲಿ ಮದ್ಯ ನೀಡುತ್ತಿದ್ದ ದೇವರಾಜು ಬಿನ್ ಬಸವೇಗೌಡ (35),ಹಟ್ನ ಗ್ರಾಮಸ್ಥನನ್ನು ಬಂಧಿಸಲಾಯಿತು.ಆತನಿಂದ 180 ಎಂ.ಎಲ್. Old Admiral Brandy ಯ 4 ಟೆಟ್ರಾ ಪ್ಯಾಕ್‌ಗಳು ಹಾಗೂ 3 ಪ್ಲಾಸ್ಟಿಕ್ ಲೋಟಗಳು ವಶಪಡಿಸಿಕೊಳ್ಳಲಾಗಿದೆ. ಪ್ಯಾಕ್‌ಗಳ ಒಟ್ಟು ಮೌಲ್ಯ ₹540 ರೂ. ಆಗಿದೆ. ದೇವರಾಜು ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯ ನೀಡುತ್ತಿದ್ದ ಕಾರಣ,IPC ಸೆಕ್ಷನ್‌ಗಳಾದ 15(2), 32(3), ಮತ್ತು 5ರಡಿಯಲ್ಲಿ ಬೆಳ್ಳೂರು ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪೊಲೀಸರು ಸ್ಥಳದಲ್ಲೇ ಮಹಜರ್ ನಡೆಸಿ, ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಠಾಣೆಗೆ ಕರೆತಂದು ತನಿಖೆ ಮುಂದುವರೆಸಿದ್ದಾರೆ.

ವರದಿ :ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್ 9481838705

Related posts