ಸುದ್ದಿ 

ಚಾಮರಾಜಪೇಟೆಯಲ್ಲಿ 26 ವರ್ಷದ ಯುವಕ ನಾಪತ್ತೆ – ತಂದೆಯಿಂದ ಚಾಮರಾಜಪೇಟೆಯ ಪೊಲೀಸ್ ಠಾಣೆಗೆ ದೂರು..

Taluknewsmedia.com

ನಗರದ ಚಾಮರಾಜಪೇಟೆಯ ಪೈಪ್ ಲೈನ್ ರಸ್ತೆಯಲ್ಲಿ ಆಲೂಗಡ್ಡೆ ಚಿಪ್ಸ್ ಅಂಗಡಿ ನಡೆಸುತ್ತಿರುವ ವ್ಯಕ್ತಿಯ ಮಗನು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನ ತಂದೆ ಲಿಂಗಮೂರ್ತಿ ಬಿನ್ ಸಂಜೀವಪ್ಪ (51), ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಲಿಂಗಮೂರ್ತಿ ಯವರ ಪ್ರಕಾರ, ಅವರು ತಮ್ಮ ಕುಟುಂಬ ಸಮೇತ ಕಸ್ತೂರ್ ಬಾ ನಗರದಲ್ಲಿರುವ ಅಶ್ವಥ್ ಕಟ್ಟೆ ರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ವಾಸಿಸುತ್ತಿದ್ದಾರೆ. ಪೈಪ್ ಲೈನ್ ರಸ್ತೆ, ಸೋಮಶೇಖರ್ ತೋಟದ ಬಳಿ ಚಿಪ್ಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ಮಗ ರುದ್ರೇಶ್ (26) ಈ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದರು.

ದಿನಾಂಕ 15-06-2025 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ, ರುದ್ರೇಶ್ ತಾವು ಬಳಸುತ್ತಿದ್ದ ಟಿವಿಎಸ್ ಅಪಾಚೆ ದ್ವಿಚಕ್ರ ವಾಹನ (ನಂ. KA 05 H 2595) ತೆಗೆದುಕೊಂಡು ಹೊರಟ್ಟಿದ್ದನು. ಆದರೆ ಸಂಜೆವರೆಗೆ ಮನೆಗೆ ಮರಳದೆ, ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿದ್ದು, ಸಂಪರ್ಕ ಸಾಧ್ಯವಾಗಿಲ್ಲ.

ತಕ್ಷಣವೇ ಪೋಷಕರು ಸಂಬಂಧಿಕರು, ಸ್ನೇಹಿತರು ಹಾಗೂ ನೆರೆಹೊರೆಯವರನ್ನು ವಿಚಾರಿಸಿದರೂ ಯಾವುದೇ ಸುಳಿವು ಸಿಗದೆ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದ ಯುವಕನ ಚಹರೆಗುರುತು:

ಹೆಸರು: ರುದ್ರೇಶ್

ವಯಸ್ಸು: 26 ವರ್ಷ

ಎತ್ತರ: 5.5 ಅಡಿ

ಮೈಬಣ್ಣ: ಸಾಧಾರಣ

ಮುಖ: ದುಂಡು ಮುಖ, ಕಪ್ಪು ಗಡ್ಡ ಮತ್ತು ಮೀಸೆ

ಗುರುತುಗಳು: ಎಡ ಕಿವಿಯಲ್ಲಿ ರಿಂಗ್, ಎಡಗೈಗೆ ಸುತ್ತುವರೆದ ಟ್ಯಾಟೂ

ಕೊನೆಯ ಬಟ್ಟೆ: ಗೋಧಿ ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಶಾರ್ಟ್ಸ್

ಭಾಷೆ: ಕನ್ನಡ ಮತ್ತು ತೆಲುಗು

ಈ ಪ್ರಕರಣದ ಸಂಬಂಧ ಚಾಮರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಕಾರ್ಯ ಆರಂಭಿಸಿದ್ದಾರೆ. ಯುವಕನ ಸುಳಿವು ಸಿಕ್ಕಲ್ಲಿ ಕೂಡಲೆ ಪೊಲೀಸರು ಅಥವಾ ಪೋಷಕರನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Related posts