ಕೆಲಸಕ್ಕೆಂದು ಹೊರಗೆ ಹೋದ 19 ವರ್ಷದ ಯುವತಿ , ಮನೆಗೆ ಮರಳದೇ ನಾಪತ್ತೆ – ಆತಂಕದಲ್ಲಿ ಕುಟುಂಬಸ್ಥರು.
ನಾಪತ್ತೆಯಾದ ಯುವತಿಯ ಹೆಸರು ಜೀವಿತಾ (19). ಸುಬ್ರಹ್ಮಣಿ ಯವರು ಇಲೆಕ್ಟ್ರಿಷಿಯನ್ ಉದ್ಯೋಗದಲ್ಲಿದ್ದು, ಪತ್ನಿ ಗೀತಾ ಗೃಹಿಣಿಯಾಗಿದ್ದಾರೆ. ಇವರಿಗೆ ಈಶ್ವರಿ, ಜೀವಿತಾ, ವೈದ್ಯನಾದನ್ ಹಾಗೂ ವಾಸುದೇವನ್ ಎಂಬ ನಾಲ್ವರು ಮಕ್ಕಳು.
ಜೀವಿತಾ ಸುಮಾರು ಇಪ್ಪತ್ತು ದಿನಗಳ ಹಿಂದೆ ಹೆಚ್ಎಸ್ಆರ್ ಲೇಔಟ್ನ ಪ್ರೋಫೇಷನ್ ಕೂರಿಯರ್ ಆಫೀಸ್ನಲ್ಲಿ ಕೆಲಸಕ್ಕೆ ಸೇರಿದಳು. ದಿನಾಂಕ 18.06.2025ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೊರಟ ಜೀವಿತಾ, ನಂತರ ಮನೆಗೆ ಮರಳಿಲ್ಲ.
ಅದರ ಬಳಿಕ ಪೋಷಕರು ಜೀವಿತಾಳ ಮೋಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಫೋನ್ ಮನೆಯಲ್ಲಿಯೇ ಬಿಟ್ಟಿದ್ದು ಕಂಡುಬಂದಿದೆ. ನಂತರ ಆಕೆ ಕೆಲಸ ಮಾಡುವ ಕಚೇರಿಗೆ ಕರೆ ಮಾಡಿದಾಗ ಆ ದಿನ ಆಕೆ ಆಫೀಸ್ಗೆ ಬಾರದಿರುವುದು ತಿಳಿದು ಬಂದಿದೆ.
ಕುಟುಂಬಸ್ಥರು ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಗದ ಕಾರಣ ಇದೀಗ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಚಹರೆ ವಿವರ:
ಹೆಸರು: ಜೀವಿತ
ವಯಸ್ಸು: 19
ಎತ್ತರ: 4.8 ಅಡಿ
ಮುಖ: ದುಂಡು
ಮೈಬಣ್ಣ: ಗೋಧಿ
ಕೂದಲು: ಕಪ್ಪು
ಶರೀರ: ದೃಢ
ಬಟ್ಟೆ: ಗ್ರೇ ಬಣ್ಣದ ಟಾಪ್, ಬಿಳಿ ಪ್ಯಾಂಟ್
ಭಾಷೆ: ಕನ್ನಡ, ತಮಿಳು, ಇಂಗ್ಲಿಷ್
ಯಾರಿಗಾದರೂ ಜೀವಿತಾ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ವಿನಂತಿಸಿದ್ದಾರೆ.

