ಸುದ್ದಿ 

ಉದ್ಯೋಗ ಭರವಸೆಯ ಹೆಸರಿನಲ್ಲಿ ಹಣ ವಸೂಲಿ: ನಾಲ್ವರ ವಿರುದ್ಧ ದೂರು ದಾಖಲು.

Taluknewsmedia.com

ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಮಹಿಳೆಯಿಂದ ಹಣ ವಸೂಲಿ ಮಾಡಿ, ನಂತರ ಮೋಸ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನಟರಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನಟರಾಜ್ ಅವರ ಪತ್ನಿಗೆ ದಿನಾಂಕ 12/06/2025 ರಂದು “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಎಂಬ ಕಂಪನಿಯಿಂದ ವಾಟ್ಸ್‌ಆಪ್ ಮೂಲಕ ಸಂದೇಶವೊಂದು ಬಂದು, ಉದ್ಯೋಗಾವಕಾಶವಿದೆ ಎಂದು ತಿಳಿಸಿ ಮರುದಿನ ಕೋರಮಂಗಲದಲ್ಲಿರುವ ವಿಳಾಸಕ್ಕೆ ಸಂದರ್ಶನಕ್ಕೆ ಬರುವಂತೆ ಸೂಚಿಸಲಾಗಿತ್ತು.

ಆ ದಂಪತಿ ಸೂಚಿಸಿದ ವಿಳಾಸಕ್ಕೆ ಹೋಗಿದಾಗ ಅಲ್ಲಿ “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಇಲ್ಲದೇ “INFINOX INFO STARK SERVICE PVT LTD” ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂತು. ಕಂಪನಿಯ ಎಚ್.ಆರ್ ಕನಿಷ್ಕ ಎಂಬುವವರು ನಟರಾಜ್ ಪತ್ನಿಯ ಸಂದರ್ಶನ ನಡೆಸಿದ್ದು, 15 ದಿನಗಳಲ್ಲಿ 1500 ಫಾರಂಗಳನ್ನು ತುಂಬಬೇಕು, ಇದಕ್ಕಾಗಿ ₹15,000 ವೇತನ ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ಸರ್ವರ್ ಡೇಟಾ ವೆಚ್ಚದ ಹೆಸರಿನಲ್ಲಿ ₹4,500 ಹಣವನ್ನು ಪಾವತಿಸುವಂತೆ ಮಾಡಲಾಗಿತ್ತು.

ನಂತರ ನೇಮಕಾತಿ ಪತ್ರ ಹಾಗೂ ಇನ್‌ವಾಯ್ಸ್ ರಸೀದಿ ನೀಡೆದರೂ, ಕಂಪನಿಯ ಬಗ್ಗೆ ಆನ್‌ಲೈನ್ ಹುಡುಕಾಟ ನಡೆಸಿದಾಗ ಹಲವಾರು ಜನರು ಈ ಸಂಸ್ಥೆಯಿಂದ ಮೋಸಕ್ಕೆ ಒಳಗಾಗಿರುವುದು ನಟರಾಜ್ ಅವರಿಗೆ ಗೊತ್ತಾಯಿತು. ಈ ಸಂಸ್ಥೆಯ ಹಿಂದೆ ಮುನ್ನಡೆಸುತ್ತಿದ್ದ ಕಂಪನಿ XTANCIA TECHNO SOFT (OPC) PVT LTD ಆಗಿದ್ದು, ಇದೀಗ INFINOX INFO STARK ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದು ಬಂದಿದೆ.

ದೂರಿನ ಅನ್ವಯ, ಆರೋಪಿ ಎ1 ಆರೋನ್, ಎ2 ಶೀಲಾ ಬಾಸ್ಮನ್, ಎ3 ಜಯಲಕ್ಷ್ಮಿ, ಮತ್ತು ಎ4 ವೈರ ಪೆರಮಾಳ್ ಐಶ್ವರ್ಯ ಎಂಬುವರು ಯಾವುದೇ ಕಾನೂನು ಒಪ್ಪಂದವಿಲ್ಲದೇ “ONE INTERNET PRIVATE LTD” ಹೆಸರಿನಲ್ಲಿ ಸಂಸ್ಥೆ ನಡೆಸುತ್ತಿದ್ದು, ಸಾರ್ವಜನಿಕರನ್ನು ಮೋಸಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ನಟರಾಜ್ ಅವರು ಕೋರಮಂಗಲ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

Related posts