ಸುದ್ದಿ 

ಪತ್ನಿ ನಾಪತ್ತೆ ಪ್ರಕರಣ: ಪತಿಗೆ ಸ್ನೇಹಿತನ ಮೇಲೆ ಶಂಕೆ…

Taluknewsmedia.com

ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪತಿ ಮಂಜುನಾಥ ಬಿನ್ ಮುನಿಯಪ್ಪ (34) ಅವರು ಪೊಲೀಸರ ಬಳಿ ದೂರು ಸಲ್ಲಿಸಿದ್ದಾರೆ.

ಮಂಜುನಾಥ ತಮ್ಮ ಪತ್ನಿ ರಾಣಿ ಎಂ (24) ಮತ್ತು 3 ವರ್ಷದ ಮಗ ಯಶ್ ಜೊತೆ ವಾಸವಾಗಿದ್ದು, ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 21 ಜೂನ್ 2025 ರಂದು ಬೆಳಿಗ್ಗೆ 9.00 ಗಂಟೆಗೆ ರಾಣಿ ಎಂ ಅವರು ಕೆಲಸಕ್ಕೆಂದು ಮನೆಯಿಂದ ಹೊರಟಿದ್ದು, ಈವರೆಗೆ ಮನೆಗೆ ಮರಳಿಲ್ಲ.

ರಾಣಿಯವರ ನಾಪತ್ತೆ ಸಂಬಂಧಪಟ್ಟಂತೆ ಮಂಜುನಾಥ್ ಸಂಬಂಧಿಕರು, ಸ್ನೇಹಿತರು ಹಾಗೂ ಕೆಲಸದ ಸ್ಥಳಗಳಲ್ಲಿ ವಿಚಾರಣೆ ನಡೆಸಿದರೂ ಯಾವುದೇ ಮಾಹಿತಿ ಲಭಿಸಲಿಲ್ಲ. ಇದರಿಂದಾಗಿ ಪತ್ನಿಯ ನಾಪತ್ತೆಗೆ ಆಕಾಶ್ ಎಂಬ ವ್ಯಕ್ತಿಯು ಸಂಬಂಧ ಹೊಂದಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾದ ರಾಣಿ ಎಂ ಅವರನ್ನು ಶೀಘ್ರವೇ ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

Related posts