ಪಿಜ್ಜಾ ಡೆಲಿವರಿ ಬಾಯ್ ರಾಂಗ್ ರೂಟ್‌ನಲ್ಲಿ ಬಂದು ಜಗಳ: ವ್ಯಕ್ತಿಯ ಮೇಲೆ ಹಲ್ಲೆ…
ಹೆಚ್.ಎಸ್.ಆರ್ ಲೇಔಟ್‌ನ ಅಗರ ಲೇಕ್ ಬಳಿ ಪಿಜ್ಜಾ ಡೆಲಿವರಿ ಬಾಯ್ ಒಬ್ಬರು ದ್ವಿಚಕ್ರ ವಾಹನದಲ್ಲಿ ರಾಂಗ್ ರೂಟ್‌ನಲ್ಲಿ ಬಂದು ಅಪಘಾತಕ್ಕೆ ಕಾರಣರಾಗಿದ್ದು, ಬಳಿಕ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಮನೋಜ್ ಕುಮಾರ್.ಹೆಚ್ ಅವರು ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ಕನಕಪುರದ ಬಿಸಿಎಎಂಸಿ ಲೇಔಟ್, ರಘುನಹಳ್ಳಿಯಲ್ಲಿ ವಾಸವಿದ್ದಾರೆ. ಜೂನ್ 21 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅವರು ಅಗರ ಲೇಕ್ ಬಳಿಯ ಡೊಮಿನೋಸ್ ಹತ್ತಿರ ರಸ್ತೆಯನ್ನು ದಾಟುತ್ತಿರುವಾಗ, KA-05-LM-0482 ಸಂಖ್ಯೆಯ ಪಿಜ್ಜಾ ಡೆಲಿವರಿ ವಾಹನ ಚಾಲಕನು ರಾಂಗ್ ರೂಟ್‌ನಲ್ಲಿ ಬಂದು ಅವರ ವಾಹನಕ್ಕೆ ಗುದ್ದಿದನು.
ಅಪಘಾತದ ನಂತರ ಮಾತಿಗೆ ಮಾತು ಬೆಳೆದು, ಡೆಲಿವರಿ ಬಾಯ್ ಮತ್ತು ಅವನ ಸ್ನೇಹಿತ ಇಬ್ಬರೂ ಸೇರಿ ಮನೋಜ್ ಕುಮಾರ್ ಅವರನ್ನು ತಡೆದು ಕೈಗಳಿಂದ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಮನೋಜ್ ಕುಮಾರ್ ನ ಎಡಗೈಗೆ ಗಾಯವಾಗಿದ್ದು, ಆತಂಕ ಉಂಟಾಗಿದೆ.
ಈ ಕುರಿತು ಹೆಚ್.ಎಸ್.ಆರ್ ಲೇಔಟ್ ನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಡೆಲಿವರಿ ಬಾಯ್ ಮತ್ತು ಅವನ ಸ್ನೇಹಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

