ಸುದ್ದಿ 

ಹುಬ್ಬಳ್ಳಿಯಲ್ಲಿ ಜೂಜಾಟ ದಾಳಿ: ಆರೂಣ ಬಿಲಾನಾ ಸೇರಿ 5 ಜನರ ವಿರುದ್ಧ ಪ್ರಕರಣ ದಾಖಲು

Taluknewsmedia.com

ಹುಬ್ಬಳ್ಳಿ, ಜೂನ್ 24: ಹಳೇಹುಬ್ಬಳ್ಳಿ ತಿಮ್ಮಸಾಗರ ಪಾಟ ಹತ್ತಿರದ ಖುಲ್ಲಾ ಜಾಗೆಯಲ್ಲಿ ಜೂಜಾಟ ನಡೆಯುತ್ತಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಆರುಣ ಬಿಲಾನಾ ಎಂಬುವವರು ಹಾಗೂ ಇವರು ಸೇರಿದಂತೆ ಇನ್ನೂ 4-5 ಜನರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಾಕಿಕೊಂಡು ಇಸ್ಪೆಟ್ ಎಲೆಗಳ ಮೂಲಕ ಅಂದರ್-ಬಾಹರ್ ಆಟವನ್ನಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಬಿದ್ದರು.

ಈ ಕುರಿತು ಮಾಹಿತಿ ಬಂದ ತಕ್ಷಣ ಸ್ಥಳೀಯ ಠಾಣೆಯ ಸಿಬ್ಬಂದಿ ಸಿ.ಪಿ.ಸಿ. 1783, 1811 ಮತ್ತು 2962 ನೇದವರನ್ನು ಒಳಗೊಂಡ ತಂಡ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಾಗಿದ್ದು, ಸನಿಹದಲ್ಲಿಯೇ ನಿಂತು ನೋಡಿ ಮಾಡಿ ಪ್ರಕರಣವನ್ನು ದೃಢಪಡಿಸಿದೆ.ಸ್ಥಳದಲ್ಲಿಯೇ ವಾಚ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ, ಬಳಿಕ ಠಾಣೆಗೆ ಮರಳಿ ದೂರು ದಾಖಲಿಸಿದ್ದು, ಆಧಾರದ ಮೇಲೆ ಹುಬ್ಬಳ್ಳಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 38/2025 ರಂತೆ ಕರ್ನಾಟಕ ಪೊಲೀಸ್ ಕಾಯಿದೆ-1963ರ ಸೆಕ್ಷನ್ 87 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಈ ಸಂಬಂಧ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಹಂತದ ತನಿಖೆ ಕೈಗೊಳ್ಳಲಾಗಿದೆ.

ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

Related posts