ಧಾರವಾಡದಲ್ಲಿ ಗಾಂಜಾ ಹೊಂದಿರುವ ಬಗ್ಗೆ ಸಂಶಯ – ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಜೂನ್ 20 ರಂದು ಮಧ್ಯಾಹ್ನ ಸುಮಾರು 3:30 ಗಂಟೆಯ ಸುಮಾರಿಗೆ ಧಾರವಾಡ ಜಿಲ್ಲೆಯ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಲಗಾರ ಲೇ ಔಟ್, ಬೆಲ್ಲದನಗರ ರಸ್ತೆಯ ಬಳಿಯ ಖುಲ್ಲಾ ಜಾಗೆಯಲ್ಲಿರುವ ಕೆರೆಯ ಹತ್ತಿರ ಗಾಂಜಾ ಎಂಬ ಮಾದಕ ವಸ್ತು ಹೊಂದಿರುವ ಬಗ್ಗೆ ಗಂಭೀರ ಶಂಕೆ ವ್ಯಕ್ತವಾಗಿದೆ.ಸಂಬಂಧಿತ ಸ್ಥಳದಲ್ಲಿ ನಮೂದಾದ ವ್ಯಕ್ತಿಯು ಮಾದಕ ಪದಾರ್ಥ ಗಾಂಜಾವನ್ನು ಹೊಂದಿರಬಹುದೆಂಬ ಅನುಮಾನದ ಕುರಿತು ಫಿರ್ಯಾದಿದಾರರು ಸರ್ಕಾರ ಪರವಾಗಿ ಅಧಿಕೃತ ದೂರನ್ನು ಸಲ್ಲಿಸಿದ್ದು, ಆಧಾರದ ಮೇರೆಗೆ ವಿದ್ಯಾಗಿರಿ ಠಾಣೆಯ ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದಾರೆ. ಸಂಶಯಿತನ ವಿರುದ್ಧ ಸಧ್ಯಕ್ಕೆ ಕಾನೂನುಬದ್ಧ ತನಿಖೆ ಪ್ರಾರಂಭಿಸಲಾಗಿದ್ದು, ಮಾದಕ ದ್ರವ್ಯ ನಿಷೇಧ ಕಾಯ್ದೆಯಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

