ಹುಬ್ಬಳ್ಳಿ: ಎಮ್.ಡಿ.ಎಮ್.ಎ ಮಾದಕ ವಸ್ತು ವಶಪಡಿಕೆ – ಆರೋಪಿತರ ಬಂಧನ
ಹುಬ್ಬಳ್ಳಿ, ಜೂನ್ 24: ದಿನಾಂಕ 22.06.2025 ರಂದು ಮಧ್ಯಾಹ್ನ 2-15 ಗಂಟೆ ಸುಮಾರಿಗೆ ಹುಬ್ಬಳ್ಳಿಯ ವಿದ್ಯಾನಗರದ ಕಲ್ಯಾಣನಗರದಲ್ಲಿರುವ ಗೋಲ್ಡನ್ ಸ್ಟಾರ್ ಅಪಾರ್ಟ್‌ಮೆಂಟ್‌ನ ಎಫ್-2 ಮನೆನಲ್ಲಿ ನಿಷೇಧಿತ ಮಾದಕ ವಸ್ತುವಿನ ಸಂಬಂಧ ಕಾರ್ಯಾಚರಣೆ ನಡೆಸಲಾಯಿತು.ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಆರೋಪಿತರು ಸಂಬಂಧಪಟ್ಟ ಸ್ಥಳದಲ್ಲಿ ನಿಷೇಧಿತ ಎಮ್.ಡಿ.ಎಮ್.ಎ ಮಾದಕ ವಸ್ತುವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಸೇವನೆ ಮಾಡುವ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.ಫಿರ್ಯಾದಿದಾರರು ಹಾಗೂ ಸಿಬ್ಬಂದಿ ಸದಸ್ಯರು ಸೇರಿ ತಕ್ಷಣದ ದಾಳಿಯಲ್ಲಿ ಎಮ್.ಡಿ.ಎಮ್.ಎ ಮಾದಕ ವಸ್ತು ಒಟ್ಟು 43.08 ಗ್ರಾಂ ತೂಕದ ಮೊತ್ತ – ರೂ. 2,19,000/- ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿತರ ಬಳಿ ಇದ್ದ ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ.ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಪರವಾಗಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೀತಾ ಇದೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

