ಸುದ್ದಿ 

ಪತ್ನಿಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆ ನೀಡಿದ ಪತಿ ಹಾಗೂ ಮನೆಯವರ ವಿರುದ್ಧ ಪೊಲೀಸ್ ಪ್ರಕರಣ

Taluknewsmedia.com

ನಾಗಮಂಗಲ ತಾಲೂಕಿನಲ್ಲಿ ದೌರ್ಜನ್ಯದಿಂದ ಮಹಿಳೆಯೊಬ್ಬರು ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ಹಾಗೂ ಮನೆಯ ಇತರ ಸದಸ್ಯರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.

ಅಶ್ವಿನಿ ಎಸ್ ಎಚ್ ಶಿಲ್ಪಾಪುರ ಗ್ರಾಮದಿಂದಾಗಿದ್ದು, ಮೊದಲ ಮದುವೆಯ ಪತಿ ಮೃತರಾದ ಬಳಿಕ ಅವರು ತಮ್ಮ ಮಕ್ಕಳೊಂದಿಗೆ ಕೆ.ಮಲ್ಲೇನಹಳ್ಳಿಗೆ ಬಂದು ನೆಲೆಸಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣಶೆಟ್ಟಿ ಎಂಬುವವರ ಪುತ್ರ ವಿನೋದ್ ಕುಮಾರ್ ಎಂಬಾತನೊಂದಿಗೆ ಪ್ರೀತಿ ಬೆಳಸಿ, ಕಾನೂನುಬದ್ಧವಾಗಿ ಮದುವೆಯಾಗಿದ್ದರು.

ಮದುವೆಯ ನಂತರ ಆರಂಭದಲ್ಲಿ ದಾಂಪತ್ಯ ಜೀವನ ಸುಖಮಯವಾಗಿದ್ದರೂ, ಕೆಲ ತಿಂಗಳುಗಳಲ್ಲಿ ಪತ್ನಿ ಮೇಲೆ ದೈಹಿಕ, ಮಾನಸಿಕ ಮತ್ತು ಲೈಂಗಿಕ ಹಿಂಸೆ ಆರಂಭವಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಪತಿ, ಅತ್ತೆ ಮತ್ತು ಗಂಡನ ಅಕ್ಕ ಸೇರಿ ಪತ್ನಿಗೆ ವರದಕ್ಷಿಣೆಗಾಗಿ ಒತ್ತಡ ಹೇರಿದಷ್ಟೇ ಅಲ್ಲದೆ, ಕುಡಿದು ಬಂದು ಗಲಾಟೆ ಮಾಡುವುದು, ಬಟ್ಟೆ ಹರಿದು ಬೀದಿಯಲ್ಲಿ ಅವಮಾನ ಮಾಡುವುದು, ಬಲವಂತದಿಂದ ಖಾಸಗಿ ಅಂಗಾಂಗಗಳ ವಿಡಿಯೋ ಚಿತ್ರೀಕರಣ ಮಾಡಿ ಶೋಷಣೆ ಮಾಡಿರುವ ಆರೋಪ ಕೂಡ ವಿದೆ.

ಇದೇ ಅಲ್ಲದೆ, ಆರೋಪಿಯಾಗಿರುವ ಪತಿ ತನ್ನ ಸ್ನೇಹಿತನಿಗೆ ಆ ವೀಡಿಯೋಗಳನ್ನು ಕಳುಹಿಸಿ, ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತ ಹೀನ ಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ಅಶ್ವಿನಿ ಎಸ್ ಹೆಚ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಹಲವಾರು ಐಪಿಸಿ ಸೆಕ್ಷನ್‌ಗಳು ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದು, ಆರೋಪಿಗಳ ಬಂಧನ ಸಾಧ್ಯತೆ ಇದೆ.

ಸಂಪರ್ಕಿಸಿದ ಪೊಲೀಸ್ ಮೂಲಗಳ ಪ್ರಕಾರ, ಅಶ್ವಿನಿ ಎಸ್ ಹೆಚ್ ಅವರ ದೂರಿನಲ್ಲಿ ಏರ್ಪಟ್ಟಿರುವ ಐಟೆಂಗಳ ಶ್ರೇಣಿಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಸೈಬರ್ ಸೆಲ್‌ನ ಸಹಕಾರದಿಂದ ತನಿಖೆ ಮುಂದುವರಿಸಲಾಗುತ್ತಿದೆ.

ವರದಿ :

ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್

Related posts