ವಾಹನ ಅಪಘಾತ: ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ
ಹುಬ್ಬಳ್ಳಿ, 24 ಜೂನ್ 2025:
ನಗರದ ರಿಂಗರೋಡ್ ರಸ್ತೆಯಲ್ಲಿ ಇಂದು ಮುಂಜಾನೆ ಸುಮಾರು 04:30 ಗಂಟೆಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೆಎ-01/ಎಆರ್-1667 ನಂಬರಿನ ಟ್ಯಾಂಕರ್ ಅನ್ನು ಚಾಲನೆ ಮಾಡುತ್ತಿದ್ದ ಕೃಷ್ಣಮೂರ್ತಿ ತಂದೆ ಅಮಾಸೆಗೌಡ, ಸಾ|| ಚಿಕ್ಕಗಂಡಸೆ, ತಾ|| ಅರಸಿ ಕೆರೆ, ಜಿ|| ಹಾಸನ, ಈತನು ಅಪಘಾತಕ್ಕೆ ಕಾರಣನಾಗಿದ್ದಾನೆ.
ಚಾಲಕನು ಟ್ಯಾಂಕರ್‌ನ್ನು ರಿಂಗರೋಡ್ ಕಡೆಯಿಂದ ಅಂಚಟಗೇರಿ ದಿಕ್ಕಿಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ ವೇಳೆ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರಿನ ರಸ್ತೆಯ ಪಕ್ಕದಲ್ಲಿರುವ ತೆರಿಗೆ (ಕಟ್ಟಡ ಭಾಗ) ಮೇಲೆ ನುಗ್ಗಿ ಈ ಘಟನೆ ವೇಳೆ ಲಾರಿಯ ಬಲಭಾಗವು ಗಂಭೀರವಾಗಿ ಜಖಂಗೊಂಡಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವಾಹನ ಚಾಲಕರಿಂದ ಸಂಭವಿಸುವ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯ ವಿರುದ್ಧ ಸಾರ್ವಜನಿಕರಲ್ಲಿ ಕಳವಳ ವ್ಯಕ್ತವಾಗಿದೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

