ಸುದ್ದಿ 

ಅಪಘಾತ ಪ್ರಕರಣ : ಹುಬ್ಬಳ್ಳಿ: ನಾಯಿ ತಪ್ಪಿಸಲು ಹೋಗಿ ವಿಮಾನ ನಿಲ್ದಾಣದ ಕಂಪೌಂಡ್‌ಗೆ ಕಾರು ಡಿಕ್ಕಿ

Taluknewsmedia.com

ಹುಬ್ಬಳ್ಳಿ: ದಿನಾಂಕ 15.06.2025 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ, ವಿದ್ಯಾನಗರದ ಶಿರೂರ ಪಾರ್ಕ ನಿವಾಸಿ ಸಾಯಿಪ್ರಭು ತಂದೆ ಸತೀಶ ಜಾಧವ ಎಂಬವರು ಕಾರು ನಂಬರ ಕೆಎ-63 ಎಂ-3577 ನೇ ನಂಬರಿನ ಪಿರ್ಯಾಧಿದಾರರೊಂದಿಗೆ ಪ್ರಯಾಣಿಸುತ್ತಿದ್ದರು. ಇವರು ಗೋಕುಲ ರೋಡದಲ್ಲಿರುವ ತ್ರಿಲೋಕ ಲಾನ್ಸ್ ಹಾಲ್ ಬಳಿಯಿಂದ ಸಾರ್ವಜನಿಕ ರಸ್ತೆಯ ಮೂಲಕ ಅಕ್ಷಯ ಪಾರ್ಕ ಸರ್ಕಲ್ ಕಡೆಗೆ ಯು-ಟರ್ನ್ ತೆಗೆದುಕೊಳ್ಳುತ್ತಿದ್ದರು.

ಆ ಸಂದರ್ಭದಲ್ಲಿ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ, ಚಾಲಕನಾದ ಸಾಯಿಪ್ರಭುನವರು ಅದನ್ನು ತಪ್ಪಿಸಲು ಪ್ರಯತ್ನಿಸಿದ್ದು, ನಿರ್ಲಕ್ಷತೆಯಿಂದ ಕಾರಿನ ನಿಯಂತ್ರಣ ತಪ್ಪಿ, ಕಾರು ಎಡಬದಿಗೆ ಸರಿದು ವಿಮಾನ ನಿಲ್ದಾಣದ ಕಂಪೌಂಡ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ಕಾರು ನಂಬರ ಕೆಎ-63 ಎಂ-3577 ಗೆ ನಷ್ಟ ಉಂಟಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

Related posts