ಸುದ್ದಿ 

ಅಪಘಾತದಲ್ಲಿ ಯುವಕನ ದುರ್ಘಟನಾತ್ಮಕ ಸಾವು, ಮತ್ತೊಬ್ಬ ಗೆಳೆಯನಿಗೆ ಗಂಭೀರ ಗಾಯ

Taluknewsmedia.com

ಹುಬ್ಬಳ್ಳಿ, ಜೂನ್ 25: ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 10.00 ಗಂಟೆಗೆ ನಡೆದಿದೆ. ಮೃತ ಯುವಕನನ್ನು ಚಿನ್ಮಯ ಶಿವಶಂಕರಯ್ಯ ಹಿರೇಮಠ (ವಯಸ್ಸು: 19), ನಿವಾಸಿ ಕೇಶ್ವಾಪುರ, ಹುಬ್ಬಳ್ಳಿ ಎಂದು ಗುರುತಿಸಲಾಗಿದೆ.

ಚಿನ್ಮಯ ತನ್ನ ಗೆಳೆಯ ಲೋಹಿತ ನಂದ್ಯಾಳ (ವಯಸ್ಸು: 19, ಸಾ: ಆಂಜನೇಯನಗರ, ಹುಬ್ಬಳ್ಳಿ) ಅವರನ್ನು ಜೊತೆಯಲ್ಲಿ ಕೂಡಿ, ತಮ್ಮ ಮೋಟಾರ್ ಸೈಕಲ್ ನಂಬರ್ ಕೆಎ-63 ಜೆ-4294 ಮೇಲೆ ಅಕ್ಷಯ ಪಾರ್ಕ್ ಸರ್ಕಲ್ ಕಡೆಯಿಂದ ಕೆ.ಎಲ್.ಇ ಕಾಲೇಜ್ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಇದೇ ವೇಳೆ ಎದುರಿನಿಂದ ಬರುತ್ತಿದ್ದ ಟ್ರಾಕ್ಟರ್ ನಂಬರ್ ಕೆಎ-25 ಸಿ-8861/62 ಅನ್ನು ನವೀನ ನಾಗರಾಜ ಸಾರಗೆ (ವಯಸ್ಸು: 26, ಸಾ: ಭಾರತಿ ನಗರ, ಗೋಕುಲ ರೋಡ್, ಹುಬ್ಬಳ್ಳಿ) ಎಂಬಾತ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ. ಹೆಚ್‌.ಪಿ. ಪೆಟ್ರೋಲ್ ಪಂಪ ಒಳಗಿನಿಂದ ಸಾರ್ವಜನಿಕ ರಸ್ತೆ ಕ್ರಾಸ್ ಮಾಡಿ ಅಕ್ಷಯ ಪಾರ್ಕ್ ಸರ್ಕಲ್ ಕಡೆಗೆ ತಿರುಗುತ್ತಿದ್ದ ವೇಳೆ ಚಿನ್ಮಯನ ಮೋಟಾರ್ ಸೈಕಲ್‌ಗೆ ತೀವ್ರವಾಗಿ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಚಿನ್ಮಯ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಸ್ನೇಹಿತ ಲೋಹಿತ ನಂದ್ಯಾಳ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

Related posts