ಸುದ್ದಿ 

ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

Taluknewsmedia.com

ಹುಬ್ಬಳ್ಳಿ, ಜೂನ್ 25: ದಿನಾಂಕ 23.06.2025 ರಂದು ಮಧ್ಯಾಹ್ನ 2.15 ಗಂಟೆಯ ಸುಮಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಕಡೆಯಿಂದ ಹೊಸೂರ ಸರ್ಕಲ್ ಕಡೆಗೆ ಸಾಗುತ್ತಿರುವ ಸಾರ್ವಜನಿಕ ರಸ್ತೆಯಲ್ಲಿ ದಿ ಪರ್ಣ ಹೋಟೇಲ್ ಹತ್ತಿರ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕ್ಷಣದಲ್ಲಿ ಓರ್ವನ ಜೀವ ಹಾರಿಹೋಗಿದೆ.

ಪ್ರಕರಣದ ವಿವರದಲ್ಲಿ, ಆರೋಪಿತನಾದ ಹಣಮಪ್ಪ (45), ತಂದೆ ನಿಂಗಪ್ಪ ಚುಂಚನೂರ, ವಾಸ: ನಲವಡಿ, ತಾ: ನವಲಗುಂದ – ಈತನು ಕೆಎಸ್‌ಆರ್‌ಟಿಸಿ ಬಸ್ (ನಂಬರ: ಕೆಎ-25/ಎಫ್-3261) ಚಲಾಯಿಸುತ್ತಿದ್ದನು. ಈ ಬಸ್ಸು excessive speed ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ ವೇಳೆ, ಬಸ್ಸು ಪಿರ್ಯಾದಿದಾರರ ಗಂಡನಾದ ತಿರುಪತಿ (40), ತಂದೆ ಹನಮಂಪಪ್ಪ ವಡರ, ಸಾ: ನಾವಳ್ಳಿ ಪ್ಲಾಟ್, ಗೋಕುಲ ರೋಡ, ಹುಬ್ಬಳ್ಳಿ – ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ (ನಂಬರ: ಕೆಎ-63/ಯು-0479) ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅವರನ್ನು ರಸ್ತೆಗೆ ಕೆಡವಿದೆ.

ಡಿಕ್ಕಿಯಿಂದ ತಿರುಪತಿ ರಸ್ತೆಗೆ ಬಿದ್ದು ಬಸ್ಸಿನ ಎಡಬದಿಯ ಹಿಂಬದಿ ಗಾಲಿ ತಲೆಯ ಮೇಲೆ ಹತ್ತಿ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ದಾರುಣವಾಗಿ ಮರಣ ಹೊಂದಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರ ಪ್ರಕಾರ, ಆರೋಪಿತ ಚಾಲಕನ ಅಜಾಗರೂಕ ಚಾಲನೆ ಈ ದುರ್ಘಟನೆಗೆ ಕಾರಣವಾಗಿದೆ.

ಸ್ಥಳೀಯರಿಂದ ಆಕ್ರೋಶ:
ಈ ಅಪಘಾತದ ನಂತರ ಸ್ಥಳೀಯರು ಘಟನಾ ಸ್ಥಳದಲ್ಲಿ ಗುಂಪುಗೂಡಿದ್ದು, ವಾಹನ ಚಾಲಕರ ಅಜಾಗರೂಕತನವನ್ನು ಕಟ್ಟೆಚ್ಚರಗೊಳಿಸುವಂತೆ ಮನವಿ ಮಾಡಿದರು. ಘಟನೆಯು ಸಂಚಾರದ ಭಾರೀ ಅಡಚಣೆಗೆ ಕಾರಣವಾಯಿತು.

ಪೊಲೀಸ್ ತನಿಖೆ ಮುಂದುವರಿದೆ.

ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

Related posts