ಸುದ್ದಿ 

ಕೋಗಿಲು ಕ್ರಾಸ್ ಬಳಿ ಬಾರ್ ಮೇಲೆ ಪೀಸ್ ಪೊಲೀಸ್ ದಾಳಿ: ಅಕ್ರಮ ಮದ್ಯ ಮಾರಾಟ ಪತ್ತೆ

Taluknewsmedia.com

ನಗರದ ಯಲಹಂಕದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಕೋಗಿಲು ಕ್ರಾಸ್ ಬಳಿಯ Siri Spirit Bar ನಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಾರ್ ತೆರೆಯುವ ಮೂಲಕ ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಪೊಲೀಸರು ಸ್ಥಳದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಮಂಗಳವಾರ ಮುಂಜಾನೆ 4:00 ರಿಂದ 8:00 ಗಂಟೆಯವರೆಗೆ ಜನಸಾಮಾನ್ಯರು ವಾಕಿಂಗ್ ಮಾಡುವ ಪ್ರದೇಶಗಳಲ್ಲಿ ವಿಶೇಷ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಪಿ.ಸಿ. 19261 ಹಾಗೂ ಸಿ.11190 ರವರು ಗಸ್ತು ಹೊಡುತ್ತಿದ್ದ ವೇಳೆ, ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಕೋಗಿಲು ಕ್ರಾಸ್ ಬಳಿ ಬಾರ್ ಬಾಗಿಲು ತೆರೆಯಲಾಗಿದ್ದು.ಕೆಲ ವ್ಯಕ್ತಿಗಳು ಒಳಗೆ ಮತ್ತು ಹೊರಗೆ ನಿಂತಿರುವುದು ಗಮನಿಸಿದರು.

ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋದಾಗ ಬಾರ್ ಒಳಗೆ ಗ್ರಾಹಕರಿಗೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದ್ದು, ಇದು ಬಾರ್ ಲೈಸೆನ್ಸ್ ನಿಯಮ ಉಲ್ಲಂಘನೆಯಾಗಿರುವುದಾಗಿ ದೃಢಪಟ್ಟಿದೆ. ಬಾರ್ ಮಾಲೀಕರು ಮತ್ತು ಸಿಬ್ಬಂದಿ ನಿರ್ಬಂಧಿತ ಸಮಯದ ಹೊರತಾಗಿ ಬಾರ್ ತೆರೆಯುವ ಮೂಲಕ ಅಕ್ರಮ ಮದ್ಯ ವ್ಯಾಪಾರದಲ್ಲಿ ತೊಡಗಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ಸ್ಥಳೀಯ ಠಾಣೆಗೆ ವರದಿ ನೀಡಲಾಗಿದ್ದು, ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Related posts