ಸುದ್ದಿ 

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದರು

Taluknewsmedia.com

ಅಮೃತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವು ಗಂಭೀರ ಆರೋಪಗಳಲ್ಲಿ ತಲೆಮರೆಸಿಕೊಂಡಿದ್ದ ಶ್ರೀನಿವಾಸ್ @ ಕೋಟೆ (ವಯಸ್ಸು 58), ತಂದೆ ನಂಜುಡಪ್ಪ, ನಿವಾಸಿ ಗಿಂಗ್ರಪ್ಪ ಲೇಔಟ್, ಶ್ರೀರಾಮಪುರ, ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆಸಾಮಿ ವಿರುದ್ಧ 307, 324, 323, 504, 506 r/w 34 IPC ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ಮಾನ್ಯ ಎಸಿಎಿಎಂಎ 7ನೇ ನ್ಯಾಯಾಲಯವು ಉದ್ಯೋಷಣೆ ಹೊರಡಿಸಿತ್ತು. ಜಾಮೀನಿನಲ್ಲಿ ಬಿಡುಗಡೆಯಾಗಿ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.

ಪೊಲೀಸ್ ಸಿಬ್ಬಂದಿ ಎಎಸ್‌ಐ ಶ್ರೀ ಚಿನ್ನಪ್ಪ ಹಾಗೂ ಹೆಡ್ ಕಾನ್ಸ್ಟೆಬಲ್ 11367 ದೇವರಾಜ್ ಅವರು, ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ, 18 ಜೂನ್ 2025ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ವೆಂಕಟೇಗೌಡ ಲೇಔಟ್‌ನ ಮಸೀದಿ ಪಕ್ಕದ ಮನೆ ಬಳಿ ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಿ ಠಾಣೆಗೆ ಕರೆತರಲಾಯಿತು.

ಆಸಾಮಿಯ ವಿರುದ್ಧ ನ್ಯಾಯಾಲಯದ ಆದೇಶದ ಪ್ರಕಾರ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಬಾತ್ಮೀದಾರರ ಸಹಕಾರಕ್ಕೂ ಪ್ರಶಂಸೆ ವ್ಯಕ್ತವಾಗಿದೆ.

Related posts