ಸುದ್ದಿ 

ನಿವೃತ್ತ ಪೊಲೀಸ್ ಅಧಿಕಾರಿಯ ಮನೆಯಿಂದ ಗ್ಯಾಸ್ ಸಿಲಿಂಡರ್ ಕಳವು

Taluknewsmedia.com


ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಬೊಮ್ಮಸಂದ್ರದ ವೈಷ್ಣವಿ ನಿಲಯದಲ್ಲಿ ಗ್ಯಾಸ್ಸು ಸಿಲಿಂಡರ್ ಕಳವು ಪ್ರಕರಣ ವರದಿಯಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಶ್ರೀ ರಾಮ್ ಶೆಟ್ಟಿ ಅವರು ನೀಡಿರುವ ದೂರಿನ ಆಧಾರದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಶ್ರೀ ರಾಮ್ ಶೆಟ್ಟಿ (72 ವರ್ಷ) ಅವರು ತಮ್ಮ ಕುಟುಂಬದೊಂದಿಗೆ ದೊಡ್ಡ ಬೊಮ್ಮಸಂದ್ರದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿದ್ದುಕೊಂಡು ಜೀವನ ನಡೆಸುತ್ತಿದ್ದಾರೆ. ತಮ್ಮ ಮಗಳು ರಮ್ಯ ರಾಮ್ ಶೆಟ್ಟಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಅವರು ವಾಸಿಸುವ ಬ್ಲಾಕ್‌ನಲ್ಲಿ ಮೂರು ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ಎಲ್ಲಾ ಮನೆಗಳ ಗ್ಯಾಸ್ಸು ಸಿಲಿಂಡರ್ ಸಂಪರ್ಕಗಳನ್ನು ನೆಲಮಹಡಿಯಲ್ಲಿ ಅಳವಡಿಸಲಾಗಿತ್ತು.

ದಿನಾಂಕ 25 ಮೇ 2025 ರ ರಾತ್ರಿ 11 ಗಂಟೆಗೆ ಮನೆಯವರು ಮಲಗಿದ ನಂತರ, 26 ಮೇ ಬೆಳಗ್ಗೆ 6 ಗಂಟೆಗೆ ಎದ್ದು ಅಡಿಗೆ ಮಾಡಲು ಸಿಲಿಂಡರ್ ಬಳಸಲು ಯತ್ನಿಸಿದಾಗ, ಗ್ಯಾಸ್ ಲಭ್ಯವಾಗದುದರಿಂದ ಪರಿಶೀಲನೆ ನಡೆಸಿದ ವೇಳೆ ಅವರು ಇಟ್ಟಿದ್ದ ಎರಡು ಹೆಚ್ಚಿ ಗ್ಯಾಸ್ಸು ಸಿಲಿಂಡರ್‌ಗಳು ಕಾಣೆಯಾಗಿರುವುದು ಗೊತ್ತಾಗಿದೆ.

ಇದೇ ವೇಳೆ, ಅದೇ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದ ಸಂದೀಪ್ ಎಂಬುವವರ ಗ್ಯಾಸ್ಸು ಸಿಲಿಂಡರ್ ಹಾಗೂ ನಾಗರಾಜ್ ಎಂಬುವವರ ಇಂಡೇನ್ ಗ್ಯಾಸ್ಸು ಸಿಲಿಂಡರ್ ಸಹ ಕಳವಾಗಿರುವುದು ತಿಳಿದು ಬಂದಿದೆ. ಈ ಮೂಲಕ ಒಟ್ಟು ನಾಲ್ಕು ಸಿಲಿಂಡರ್‌ಗಳನ್ನು ಅನಾಮಿಕರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ.

ತುರ್ತಾಗಿ ಊರಿಗೆ ತೆರಳಬೇಕಾಗಿರುವ ಸಂದರ್ಭದಿಂದ ತಡವಾಗಿ ಠಾಣೆಗೆ ಹಾಜರಾದ ಶ್ರೀ ಶೆಟ್ಟಿ ಅವರು, ಕಳವಾಗಿರುವ ಸಿಲಿಂಡರ್‌ಗಳ ಮೌಲ್ಯವನ್ನು ಸುಮಾರು ₹10,000 ಎಂದು ಅಂದಾಜಿಸಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರು ಮೊರೆಹೋದಿದ್ದಾರೆ.

ವಿದ್ಯಾರಣ್ಯಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸ್ಥಳದಲ್ಲಿ ಸಿಸಿ ಟಿವಿ ಫುಟೇಜ್ ಪರಿಶೀಲನೆ ಸೇರಿದಂತೆ ತನಿಖೆ ಆರಂಭಿಸಿದ್ದಾರೆ.

Related posts