ಸುದ್ದಿ 

ಸ್ನಾಪ್‌ಡೀಲ್‌ ಕಾರ್‌ ಕವರ್ ಖರೀದಿಸಿ ಹಣ ಕಳೆದುಕೊಂಡ ಗ್ರಾಹಕ – ಸೈಬರ್ ವಂಚನೆ ಪ್ರಕರಣ

Taluknewsmedia.com

ಸ್ನಾಪ್‌ಡೀಲ್‌ನಿಂದ ಕಾರ್ ಕವರ್ ಖರೀದಿಸಿ ನಂತರ ಹಣವನ್ನು ಕಳೆದುಕೊಂಡಿರುವ ಘಟನೆ ನಾಡಿನಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಹೆಚ್ಚುತ್ತಿರುವ ಅಂಶಕ್ಕೆ ಮತ್ತೊಂದು ಉದಾಹರಣೆ ನೀಡಿದೆ.

ಪ್ರಜ್ವಲ್ ರವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಅವರು ಆನ್‌ಲೈನ್‌ ಖರೀದಿ ವೇದಿಕೆ Snapdeal ಮೂಲಕ ಕಾರ್ ಕವರ್ ಖರೀದಿಸಿದ್ದರು. ಆದರೆ ಅದು ಹಾನಿಯಾಗಿರುವುದರಿಂದ ವಾಪಸ್ಸು ಮಾಡಿದ್ದಾರೆ. ವಾಪಸ್ಸು ಮಾಡಿದರೂ 7 ದಿನಗಳವರೆಗೆ ಹಣ ಜಮೆಯಾಗದ ಕಾರಣ, ಅವರು ನೀಡಲಾಗಿದ್ದ ಸಹಾಯವಾಣಿ ಸಂಖ್ಯೆಗಳಿಗೆ (8167899758, 7975747448) ಕರೆಮಾಡಿದರು.

ಅಲ್ಲಿಂದ ಬಂದ ಕರೆಗಳಲ್ಲಿ ತಮ್ಮ ಮೊಬೈಲ್‌ನಲ್ಲಿ ಫೋನ್‌ಪೇ ಅಪ್ಲಿಕೇಶನ್ ತೆರೆಯಲು ಹಾಗೂ UPI ಆಯ್ಕೆಯನ್ನು ಕ್ಲಿಕ್ ಮಾಡಲು ಸೂಚನೆ ನೀಡಲಾಗಿದ್ದು, ಅವರು ನೀಡಿದ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡ ಸೈಬರ್ ವಂಚಕರು, ದಿನಾಂಕ 15-06-2025 ರಂದು ಸಂಜೆ 5:59 ಗಂಟೆಗೆ ದೂರುದಾರರ ಖಾತೆ 91900100011594 ಇಂದ ₹85,954ನ್ನು IDBI ಬ್ಯಾಂಕ್‌ನ Nimesh Reang (ಖಾತೆ ಸಂಖ್ಯೆ: 122710400011231455) ಅವರ ಖಾತೆಗೆ ವರ್ಗಾಯಿಸಿದ್ದಾರೆ.

ಈ ಸಂಬಂಧ ಪ್ರಜ್ವಲ್ ರವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೈಬರ್ ಕ್ರೈಂ ವಿಭಾಗವು ತನಿಖೆ ಆರಂಭಿಸಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ಯಾವುದೇ ಅನುಮಾನಾಸ್ಪದ ಕರೆಗೆ ಸ್ಪಂದಿಸುವ ಮೊದಲು ಆತನ ನಂಬಿಕೆ ಸ್ಥಿರಪಡಿಸಿಕೊಳ್ಳುವಂತೆ ಹಾಗೂ ಯಾವುದೇ ಬ್ಯಾಂಕ್ ಅಥವಾ ಪೇಮೆಂಟ್ ಅಪ್ಲಿಕೇಶನ್ ಮಾಹಿತಿಯನ್ನು ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.

Related posts