ನಿರ್ಲಕ್ಷ್ಯದಿಂದ ಅಪಘಾತ
ಧಾರವಾಡ, 23 ಜೂನ್ 2025: ಸಾಯಂಕಾಲ 5.30 ಗಂಟೆ ಸುಮಾರಿಗೆ ಧಾರವಾಡ ಕಾರ್ಪೋರೇಷನ್ ಸರ್ಕಲ್ ಹತ್ತಿರ ನಡೆದ ಅಪಘಾತದಲ್ಲಿ 81 ವರ್ಷದ ವೃದ್ಧ ಪಾದಚಾರಿ ಮರಿಯಪ್ಪ ತಂದೆ ದುರಗಪ್ಪ ಪಡಗಲಿ ಗಾಯಗೊಂಡ ಘಟನೆ ನಡೆದಿದೆ. ಹುಬ್ಬಳ್ಳಿಯ ಅಲಾಭಕ್ಷ ತಂದೆ ಯಮನೂರಸಾಬ ನದಾಫ್ ಅವರು ಚಲಾಯಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ನಂ. ಕೆಎ-25/ಎಫ್-2870) ಅನ್ನು ಜುಬ್ಲಿ ಸರ್ಕಲ್ ಕಡೆಯಿಂದ ಕಾರ್ಪೋರೇಷನ್ ಸರ್ಕಲ್ ಕಡೆಗೆ ರಸ್ತೆಯಲ್ಲಿ ಅತೀ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ವೇಳೆ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮರಿಯಪ್ಪ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ, ಮರಿಯಪ್ಪ ಅವರಿಗೆ ಬಲವಾದ ಗಾಯಗಳಾಗಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ನಿರ್ಲಕ್ಷ್ಯ ಚಾಲನೆಯಿಂದ ಅಪಾಯವುಂಟಾಗುತ್ತಿರುವ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಲು ಪೊಲೀಸರು ಮನವಿ ಮಾಡಿದ್ದಾರೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

