ಮನೆ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಳ್ಳತನ – ₹1.20 ಲಕ್ಷ ಮೌಲ್ಯದ ವಿದ್ಯುತ್ ವೈರ್ ಕಳವು!
ಬಿಗ್ ಬ್ರೇಕಿಂಗ್: ಮನೆ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಳ್ಳತನ – ₹1.20 ಲಕ್ಷ ಮೌಲ್ಯದ ವಿದ್ಯುತ್ ವೈರ್ ಕಳವು!
ಬೆಂಗಳೂರು, ಜೂನ್ 24: ನಗರದ ಶಿವರಾಮ ಕಾರಂತ್ ನಗರ ಪೋಸ್ಟ್ ವ್ಯಾಪ್ತಿಯ ಮೇಸ್ತ್ರಿ ಪಾಳ್ಯದಲ್ಲಿ ಕಳ್ಳತನದ ಘಟನೆ ವರದಿಯಾಗಿದೆ. ಸೇಂಟ್ ಹಾನ್ ಚರ್ಚ್ ರೋಡ್ ನಂ.182ರಲ್ಲಿ ಮನೆಯೊಂದರ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ ಕಳ್ಳರು ಬೇಟೆಯಾಡಿದ್ದಾರೆ.
ಮೂಲಗಳ ಪ್ರಕಾರ, ಮನೆ ನಿರ್ಮಾಣದ ವೇಳೆ ಗೌಂಡ್ ಫ್ಲೋರ್‌ನ ಹೊರಭಾಗದಲ್ಲಿ ಅಳವಡಿಸಿದ್ದ ವಿದ್ಯುತ್ ವೈರ್‌ಗಳನ್ನು ಕತ್ತರಿಸಿ ಕಳ್ಳರು ಕದಿದುಕೊಂಡು ಹೋಗಿದ್ದಾರೆ. ಜೂನ್ 23ರಂದು ರಾತ್ರಿ 11 ಗಂಟೆಯ ವೇಳೆಗೆ ಎಲ್ಲವೂ ಸರಿಯಾಗಿತ್ತು. ಆದರೆ 24 ದಿನ ಬೆಳಿಗ್ಗೆ 8 ಗಂಟೆಗೆ ವಸ್ತುಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ಕಳ್ಳರು ಕತ್ತರಿಸಿ ಕದಿದ ವೈರ್‌ಗಳ ಮೌಲ್ಯ ಅಂದಾಜು ₹1,20,000 ರೂಪಾಯಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಪಿಗೆಹಳ್ಳಿ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಲಾಗಿದೆ.
ಇದೊಂದು ಪೂರ್ವ ಯೋಜಿತ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ನಿವಾಸಿಗಳು ಭದ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


