ಪಿಜಿ ಕೋಣೆಯಲ್ಲಿ ಎಚ್ಚರಿಕೆಯ ಕೊರತೆ: ಮ್ಯಾಕ್‌ಬುಕ್ ಮತ್ತು ಎರಡು ಮೊಬೈಲ್ ಕಳ್ಳತನ!
ನಗರದ ಪನ್ನೀರ್ ರಸ್ತೆ ಬಳಿ ಇರುವ ಪಿಜಿ ಗೃಹದಲ್ಲಿ 21 ಜೂನ್ 2025ರಂದು ಬೆಳಗಿನ ಜಾವ ಸಂಭವಿಸಿದ ಕಳ್ಳತನದ ಘಟನೆ ಆತಂಕ ಉಂಟುಮಾಡಿದೆ. ಪಿಜಿಯಲ್ಲಿ ವಾಸಿಸುತ್ತಿದ್ದ ವೀಡಿಯೋ ಎಡಿಟರ್‌ನ ಮ್ಯಾಕ್‌ಬುಕ್ ಲ್ಯಾಪ್‌ಟಾಪ್ ಹಾಗೂ ಇನ್ನಿಬ್ಬರ ಮೊಬೈಲ್‌ಗಳನ್ನು ಅಪರಿಚಿತ ಕಳ್ಳ ಕದ್ದೊಯ್ದಿದ್ದಾನೆ.
ಅಸ್ವಾಲ್ ಸ್, ಪದ್ಮೇಶ್ ರಾಠೋಡ್ ಮತ್ತು ಆಶೋಕ್‌ಟೋಪ್ ಎಂಬುವವರು ತಮಗೆ ಸೇರಿದ ಸಾಧನಗಳನ್ನು ಬೆಡ್ ಹತ್ತಿರ ಇಟ್ಟು ಮಲಗಿದ್ದರು. ಬೆಳಿಗ್ಗೆ 6:30ರ ವೇಳೆಗೆ ಎಚ್ಚರವಾದಾಗ, ಮ್ಯಾಕ್‌ಬುಕ್ ಮತ್ತು ಮೊಬೈಲ್‌ಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ಕಳ್ಳತನವಾದ ವಸ್ತುಗಳು:
ಆಪಲ್ ಮ್ಯಾಕ್‌ಬುಕ್ ಪ್ರೋ ಲ್ಯಾಪ್‌ಟಾಪ್
ಒನ್‌ಪ್ಲಸ್ ನಾರ್ಡ್ ಮೊಬೈಲ್
ಸ್ಯಾಮ್‌ಸಂಗ್ ಎ-36 ಮೊಬೈಲ್
ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಯುತ್ತಿದೆ.

