ಯಲಹಂಕ-ದೊಡ್ಡಬಳ್ಳಾಪುರ ರಸ್ತೆ ಬಳಿ ಅಪಘಾತ – ಯುವಕನಿಗೆ ಗಂಭೀರ ಗಾಯ
ಯಲಹಂಕದಿಂದ ದೊಡ್ಡಬಳ್ಳಾಪುರದತ್ತ ಅತಿವೇಗವಾಗಿ ಬರುತ್ತಿದ್ದ KA-01-HJ-1105 ಸಂಖ್ಯೆಯ ಬುಲೆಟ್ ಬೈಕ್ ಚಾಲಕನ ಅಜಾಗರೂಕ ಚಾಲನೆಯಿಂದಾಗಿ ರಸ್ತೆ ದಾಟುತ್ತಿದ್ದ ಯುವಕನೊಬ್ಬನಿಗೆ ಗಂಭೀರ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ನವೀನ್ ಅವರು ತಮ್ಮ ಸ್ನೇಹಿತ ದರ್ಶನ ರವರೊಂದಿಗೆ ತಮ್ಮ ಊರಿಗೆ ತೆರಳುತ್ತಿದ್ದು, ಕಡತನಮಲೆ ಟೋಲ್ ಹತ್ತಿರ ಒಂದು ಹೋಟೆಲ್ ಬಳಿ ನೀರು ಕುಡಿದು ವಾಪಸ್ಸಾಗುತ್ತಿದ್ದಾಗ, ಬೈಕ್ ಚಾಲಕನು ನಿಯಂತ್ರಣ ತಪ್ಪಿ ನವೀನ್ ಅವರ ಮೇಲೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯ ನಂತರ, ಸ್ಥಳೀಯ ಸಾರ್ವಜನಿಕರು ತಕ್ಷಣವೇ 108 ಅಂಬುಲೆನ್ಸ್ ಕರೆಸಿ ಗಾಯಾಳುವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ನವೀನ್ ಅವರನ್ನು ದೊಡ್ಡಬಳ್ಳಾಪುರದ ವಿಕೇರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಡಾಕ್ಟರ್ ರಿಪೋರ್ಟ್ ಪ್ರಕಾರ ಪ್ರಕಾರ, ಅವರಿಗೆ ಎರಡು ಕಾಲುಗಳು, ಎಡ ಭುಜ, ಕೈ ಹಾಗೂ ತಲೆಯ ಹಿಂಭಾಗದಲ್ಲಿ ಗಂಭೀರ ಗಾಯಗಳಾಗಿವೆ.
ನವೀನ್ ಅವರ ತಾಯಿ ಆಸ್ಪತ್ರೆಯಲ್ಲಿ ನಿರಂತರ ನಿಗಾ ವಹಿಸುತ್ತಿದ್ದು, ತಡವಾಗಿ ರಾಜನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ಕುರಿತು ದೊಡ್ಡಬಳ್ಳಾಪುರ ಪೊಲೀಸರು IPC ಸೆಕ್ಷನ್ 279 (ಅಜಾಗರೂಕ ಚಾಲನೆ) ಮತ್ತು 338 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು (FIR No. 186/2025) ತನಿಖೆ ಆರಂಭಿಸಿದ್ದಾರೆ.

