ಸುದ್ದಿ 

ಬೂರ್ಖಧಾರಿ ಮಹಿಳೆಯರಿಂದ ಚಿನ್ನದ ಅಂಗಡಿಯಲ್ಲಿ ಮೋಸ: ₹2.7 ಲಕ್ಷ ಮೌಲ್ಯದ ಚಿನ್ನದ ವಸ್ತು ಕಳವು

Taluknewsmedia.com

ನಗರದ ರಾಜಾನುಕುಂಟೆ ಗ್ರಾಮದಲ್ಲಿ ಚಿನ್ನಾಭರಣದ ಅಂಗಡಿಯಲ್ಲಿ ವಿಚಿತ್ರ ರೀತಿಯ ಮೋಸ ಪ್ರಕರಣ ಬೆಳಕಿಗೆ ಬಂದಿದೆ. ಮಾರ್ಬವೆಲ್ ಕ್ಯಾಲೆಟಿ ಗೋಲ್ಡ್ & ಡೈಮೆಂಡ್ಸ್ ಎಂಬ ಚಿನ್ನದ ಅಂಗಡಿಯಲ್ಲಿ ಇಬ್ಬರು ಅಪರಿಚಿತ ಬೂರ್ಖಧಾರಿ ಮುಸ್ಲಿಂ ಮಹಿಳೆಯರು ವ್ಯಾಪಾರಿಯ ಹೆಂಡತಿಯನ್ನೊಳಿಸಿ ₹2.7 ಲಕ್ಷ ಮೌಲ್ಯದ ಚಿನ್ನದ ವಸ್ತುಗಳನ್ನು ವಂಚನೆ ಮಾಡಿದ್ದಾರೆ.

ಮೇ 26ರಂದು ಮಾಲಿಕ ಹರೀಶ್ ದೇವಸ್ಥಾನಕ್ಕೆ ಹೋಗಿದ್ದಾಗ, ಅಂಗಡಿಯಲ್ಲಿ ಅವರ ಹೆಂಡತಿ ಸಂಪ್ರೀತ ವ್ಯಾಪಾರ ನೋಡುತ್ತಿದ್ದರು. ಈ ವೇಳೆ ಸಂಜೆ 7 ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರು ಅಂಗಡಿಗೆ ಬಂದು “ನಾವು ಹರೀಶ್ ಅವರ ಪರಿಚಯದವರು, ಉಡುಗೊರೆಗೆ ಚಿನ್ನದ ವಸ್ತು ಬೇಕು” ಎಂದು ತಿಳಿಸಿ, 32 ಗ್ರಾಂನ ಎರಡು ಚೈನ್‌ಗಳು, 3.130 ಗ್ರಾಂನ ಮೂರು ಮೊಗುವಿನ ಅಂಗೂರಗಳು, ಹಾಗೂ 2.250 ಗ್ರಾಂನ ಇತರೆ ಚಿನ್ನದ ಉಡುಗೊರೆಗಳನ್ನೂ ತೆಗೆದುಕೊಂಡರು.

ಅವರು ₹45,000 ನಗದು ಕೊಟ್ಟು ಉಳಿದ ಹಣ ಬಾಕಿಯಾಗಿದ್ದು, “ಇವು ಚಿನ್ನದ ಬಳೆಗಳು” ಎಂದು ತಮ್ಮ ಕೈಯಲ್ಲಿದ್ದ ಎರಡು ಬಳೆಗಳನ್ನು ಕೊಟ್ಟರು. ಆದರೆ ಮಾಲಿಕರು ಅಂಗಡಿಗೆ ಬಂದು ಅವು ಪರಿಶೀಲಿಸಿದಾಗ ಅವು ಕಬ್ಬಿಣದ ಬಳೆಗಳಾಗಿದ್ದು, ಮೆಲ್ನೋಟಕ್ಕೆ ಚಿನ್ನದ ಲೇಪನ ಮಾಡಲಾಗಿತ್ತು ಎಂಬುದು ಗೊತ್ತಾಯಿತು.

ಅಂಗಡಿ ಮಾಲೀಕ ಅವರ ಪತ್ನಿ ಪಡೆದ ನಂಬರುಗಳು ಕೂಡ ತಪ್ಪಾಗಿದ್ದು, ತಕ್ಷಣವೇ ಪ್ರಕರಣದ ಬಗ್ಗೆ ರಾಜನಕುಂಟೆ ಪೊಲೀಸರಿಗೆ ದೂರು ನೀಡಲಾಯಿತು. ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 189/2025 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, IPC ಸೆಕ್ಷನ್ 318, 336(1) ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ.

ರಾಜನಕುಂಟೆ ಪೊಲೀಸರು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮಹಿಳೆಯರನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಕ್ರಮ ವಹಿಸಲಾಗಿದೆ.

Related posts