ಸುದ್ದಿ 

ತಲೆಮರೆಸಿಕೊಂಡ ಆರೋಪಿ ಆನಂದ್ ಬಂಧನ: ನ್ಯಾಯಾಲಯದ ಆದೇಶ ಉಲ್ಲಂಘನೆ ಪ್ರಕರಣ

Taluknewsmedia.com

ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಎ.ಎಸ್‌.ಐ ಆಂಜನೇಯ ಅವರ ನೇತೃತ್ವದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ, ನ್ಯಾಯಾಲಯದ ಹಲವಾರು ಆದೇಶಗಳನ್ನು ನಿರ್ಲಕ್ಷಿಸಿದ ಆರೋಪಿಯನ್ನು ಬಂಧಿಸಲಾಗಿದೆ.

ಆನಂದ್ ಎಂಬ 26 ವರ್ಷದ ಯುವಕ, ಅಂಗನವಾಡಿ ಗುಣಿಅಗ್ರಹಾರ, ಶಿವಕೋಟಿ, ಹೆಸರಘಟ್ಟ ಹೋಬಳಿಯಲ್ಲಿ ವಾಸವಾಗಿದ್ದಾನೆ. ಆತನ ಮೇಲೆ IPC ಸೆಕ್ಷನ್‌ಗಳು 323, 326, 307, ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್.ಟಿ.ಎಸ್.ಸಿ-2 ನ್ಯಾಯಾಲಯದ (ಎಸ್.ಸಿ ನಂ. 187/2022) ವ್ಯಾಪ್ತಿಯಲ್ಲಿ ಪ್ರಕರಣ ವಿಚಾರಣೆಯಲ್ಲಿದೆ.

ಆನಂದ್ ಜಾಮೀನಿನ ಮೇಲೆ ಬಿಡುಗಡೆಯಾದರೂ, ದಿನಾಂಕ 11.12.2024, 17.01.2025, 14.03.2025 ಮತ್ತು 02.05.2025 ರಂದು ನಡೆಯಬೇಕಾದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ನಿರಂತರವಾಗಿ ತಲೆಮರೆಸಿಕೊಂಡಿದ್ದನು. ನ್ಯಾಯಾಲಯದ ಸೂಚನೆ ಉಲ್ಲಂಘನೆ ಮಾಡಿದ ಕಾರಣ, ಹಲವಾರು ಬಾರಿ ಬಂಧನಾ ವಾರಂಟ್‌ಗಳು ಹೊರಡಿಸಲಾಗಿತ್ತು.

ಭಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ, ಎಎಸ್‌ಐ ಆಂಜನೇಯ ಮತ್ತು ಕಾನ್ಸ್ಟೇಬಲ್ ರಂಗನಾಥ್ (ಪಿ.ಸಿ. 20056) ದಿನಾಂಕ __ ರಂದು ಬೆಳಿಗ್ಗೆ 10:15 ಕ್ಕೆ ಆನಂದ್‌ನ ಮನೆ ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಿ, 10:30 ಕ್ಕೆ ಠಾಣೆಗೆ ಕರೆತಂದರು.

ತಂಡದ ಕಡೆಯಿಂದ ನೀಡಲಾದ ಮಾಹಿತಿ ಪ್ರಕಾರ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ ಆರೋಪಿ ಆನಂದ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಕರಣ ದಾಖಲಿಸಲಾಗಿದೆ.

Related posts