ಹನ್ನೆನಹಳ್ಳಿ ಗ್ರಾಮದಲ್ಲಿ 16 ವರ್ಷದ ಬಾಲಕಿ ಕಾಣೆಯಾಗಿರುವ ಘಟನೆ ಪೋಷಕರ ಕಳವಳ
ಬೆಂಗಳೂರು ಗ್ರಾಮಾಂತರ ಜುಲೈ 2 2025
ಹನ್ನೆನಹಳ್ಳಿ, ಜೂನ್ 29 – ಸ್ಥಳೀಯ ಹನ್ನೆನಹಳ್ಳಿ ಗ್ರಾಮದಲ್ಲಿ 16 ವರ್ಷದ ಚೈತ್ರಾ ಎಂಬ ಬಾಲಕಿ ಕಾಣೆಯಾಗಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಚೈತ್ರಾ ತನ್ನ ಪೋಷಕರೊಂದಿಗೆ ಹನ್ನೆನಹಳ್ಳಿಯಲ್ಲಿ ವಾಸವಿದ್ದು, ಪ್ರಸ್ತುತ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಪವಿತ್ರ ಅವರ ಮಾಹಿತಿ ಪ್ರಕಾರ, ಜೂನ್ 29ರಂದು ಬೆಳಗ್ಗೆ 11 ಗಂಟೆಗೆ ಮನೆಯಿಂದ ಹೊರಗೆ ಹೋದ ಚೈತ್ರಾ ನಂತರ ಮನೆಗೆ ವಾಪಸ್ಸು ಬಂದಿಲ್ಲ. ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಸಂಬಂಧಿಕರು ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಕಾಣೆಯಾದ ಚೈತ್ರಾಳ ಗುರುತುಗಳಂತೆ:
ಹೆಸರು: ಚೈತ್ರಾ
ವಯಸ್ಸು: 16 ವರ್ಷ
ಎತ್ತರ: ಸುಮಾರು 5 ಅಡಿ
ಬಣ್ಣ: ಗೋದಿ
ಮುಖವಿನ್ಯಾಸ: ಗುಂಡು ಮುಖ
ಕೂದಲು: ಗುಂಗುರು ತಲೇಕೂದಲು
ಮೈಕಟ್ಟು: ಸಾದಾರಣ
ಮಂಜುಳಾ ಅವರು ಚೈತ್ರಾಳ ಫೋಟೋವನ್ನು ಕರಪತ್ರದ ಮೂಲಕ ಹಂಚಿದ್ದಾರೆ. ಈ ಕುರಿತು ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ಸಂಖ್ಯೆ 193/2025, ಸೆಕ್ಷನ್ 137(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯಾರಾದರೂ ಈ ಬಾಲಕಿಯ ಬಗ್ಗೆ ಯಾವುದೇ ಮಾಹಿತಿ ಹೊಂದಿರುವವರು ರಾಜನಕುಂಟೆ ಪೊಲೀಸ್ ಠಾಣೆಗೆ ತಕ್ಷಣ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.


