ಕೋಳಿ ಫಾರಂನಲ್ಲಿ ವಾಗ್ವಾದದಿಂದ ಮಚ್ಚು ದಾಳಿ:
ಒಬ್ಬ ವ್ಯಕ್ತಿಗೆ ಗಂಭೀರ ಗಾಯ, ನಾಲ್ವರು ವಿರುದ್ಧ ಪ್ರಕರಣ ದಾಖಲುನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಸಾಮಕಹಳ್ಳಿ ಗ್ರಾಮದಲ್ಲಿರುವ ಕೋಳಿ ಫಾರಂನಲ್ಲಿ ನಡೆದ ವಿಚಿತ್ರ ಘಟನೆ ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಿದೆ. ಕೋಳಿಮರಿಗಳ ಬೆಳವಣಿಗೆ ವಿಚಾರವಾಗಿ ಕಾರ್ಮಿಕನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಾಲ್ವರು ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಅಭಿಷೇಕ್ ಗೌಡ ಎಂಬುವವರು ಕಳೆದ ಮೂರು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಸೂಪರವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕೋಳಿಮರಿಗಳ ಬೆಳವಣಿಗೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು. ಅವರು ಇತ್ತೀಚೆಗೆ ಅಶೋಕರವರ ಫಾರಂನಲ್ಲಿ 14,000 ಕೋಳಿಮರಿಗಳನ್ನು ಬೆಳೆಸಲಾಗಿತ್ತು. ಕಂಪನಿಯ ನಿಯಮದಂತೆ ಬೆಳವಣಿಗೆಯಿಲ್ಲದ ಮತ್ತು ರೋಗಭಾದಿತ ಕೋಳಿಮರಿಗಳನ್ನು ಅವರು ಮಾರ್ಗಸೂಚಿಯಂತೆ ನಾಶಪಡಿಸಿದ್ದರು.ಫಾರಂಗೆ ಭೇಟಿ ನೀಡಿ ಕೋಳಿಮರಿಗಳನ್ನು ಪರಿಶೀಲಿಸುತ್ತಿದ್ದಾಗ, ಯಶ್ವಂತ್, ದೀಕ್ಷಿತ್, ನಿರಂಜನ್ ಹಾಗೂ ಧನುಷ್ ಎಂಬುವವರು ಈ ಕುರಿತು ವಾದವಿವಾದಕ್ಕೆ ಇಳಿದರು. ಕೆಲಸ ಮುಗಿಸಿ ಬೈಕ್ ಹತ್ತಲು ಹೊರಟಿದ್ದ ಅಭಿಷೇಕ್ ಮೇಲೆ, ಧನುಷ್ ಮಚ್ಚಿನಿಂದ ದಾಳಿ ನಡೆಸಿ ಎಡ ಭುಜ, ಬೆನ್ನು ಹಾಗೂ ಬೆರಳಿಗೆ ಗಾಯಗೊಳಿಸಿದ್ದಾನೆ.ಘಟನೆಯ ಸದ್ದಿಗೆ ಸಮೀಪದ ಜಮೀನಿನಲ್ಲಿ ಇದ್ದ ನಾರಾಯಣ ಹಾಗೂ ರಾಘವೇಂದ್ರ ಧಾವಿಸಿ ಗಾಯಾಳುವನ್ನು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಗಾಯಾಳು ಅಭಿಷೇಕ್ ನೀಡಿದ ಮೌಖಿಕ ಹೇಳಿಕೆ ಆಧರಿಸಿ, ಧನುಷ್ ಸೇರಿದಂತೆ ನಾಲ್ವರು ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಸಂಬಂಧಿತ ವಿಧಾನದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.
ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

