ಸುದ್ದಿ 

ತಟ್ಟಹಳ್ಳಿ ಅರಣ್ಯದಲ್ಲಿ ಬೆಂಕಿಗೆ ಆಹುತಿಯಾದ ಶವ ಪತ್ತೆ: ಭೀಕರ ಕೊಲೆ ಶಂಕೆ

Taluknewsmedia.com

ನಾಗಮಂಗಲ ತಾಲೂಕಿನ ತಟ್ಟಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಗಸ್ತು ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದ ವೇಳೆ ಸುಟ್ಟು ಕರಕಲಾಗಿರುವ ಅನಾಮಧೇಯ ವ್ಯಕ್ತಿಯ ಶವವೊಂದು ಪತ್ತೆ ಹಚ್ಚಿದ್ದಾರೆ. ಘಟನೆಯು ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿಯಾಗಿರುವ ಶಿವರಾಜು ಕರಡಹಳ್ಳಿ ವ್ಯಾಪ್ತಿಗೆ ಸೇರಿದ ತಟ್ಟಹಳ್ಳಿ ಗ್ರಾಮದ ಸರ್ವೇ ನಂ.68 ರ ಅರಣ್ಯ ಪ್ರದೇಶದಲ್ಲಿ ತಮ್ಮ ನಿಯಮಿತ ಗಸ್ತು ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಅವರು ಹೇಮಾವತಿ ನದಿ ಹರಿಯುವ ರಸ್ತೆಯ ಮೂಲಕ ಗಸ್ತು ನಡೆಸುತ್ತಿದ್ದಾಗ, ಉಪನಾಲೆಯ ತೂಬಿನ ಹತ್ತಿರದಿಂದ ಕೆಟ್ಟ ದುರ್ವಾಸನೆ ಮೂಡಿದ ಹಿನ್ನೆಲೆಯಲ್ಲಿ ಅವರು ಸ್ಥಳ ಪರಿಶೀಲನೆ ನಡೆಸಿದರು.ಪರಿಶೀಲನೆಯ ವೇಳೆ, ಅವರು ಒಂದು ಮನುಷ್ಯನ ಶವವನ್ನು ನೋಡಿದ್ದು, ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮೃತದೇಹದ ಮೇಲೆ ಹುಳುಗಳು ಹುಲಿದಿದ್ದು, ಟೈರ್ ಹಾಗೂ ಇತರೆ ವಸ್ತುಗಳಿಂದ ಬೆಂಕಿಹಾಕಿ ಸುಟ್ಟಿರುವ ಪಾದವಿಲ್ಲದ ಸ್ಥಿತಿಯ ಶವ ಪತ್ತೆಯಾಗಿದೆ. ಶವವು ಸುಮಾರು 25 ರಿಂದ 40 ವರ್ಷ ವಯಸ್ಸಿನ ಗಂಡಸಿನಂತಿದ್ದು, ಗುರುತಿಸಬಹುದಾದ ಯಾವುದೇ ಗುರುತುಗಳು ದೊರಕಿಲ್ಲ.ಅರಣ್ಯ ಸಿಬ್ಬಂದಿಯ ಶಂಕೆ ಪ್ರಕಾರ, ಈ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಮೂರು ನಾಲ್ಕು ದಿನಗಳ ಹಿಂದೆ ಕೊಲೆ ಮಾಡಿ ಶವವನ್ನು ಇಲ್ಲಿಗೆ ತಂದು ಸುಟ್ಟಿರಬಹುದು ಎನ್ನಲಾಗಿದೆ. ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಮೃತನ ಗುರುತು ಪತ್ತೆಹಚ್ಚುವುದು ಹಾಗೂ ಕೊಲೆ ಹಿಂದಿರುವ ಉದ್ದೇಶವನ್ನು ಗುರುತಿಸಲು ಪೊಲೀಸರು ಕ್ರಮ ವಹಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ನಾಗಮಂಗಲದ ಸಾರ್ವಜನಿಕರಲ್ಲಿ ಆತಂಕ ಮತ್ತು ಕುತೂಹಲ ನಿರ್ಮಾಣವಾಗಿದೆ.

ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

Related posts