ಸುದ್ದಿ 

ಪತಿಯ ಹಲ್ಲೆ ಮತ್ತು ಜೀವ ಬೆದರಿಕೆ: ಮಹಿಳೆಯು ಮತ್ತೆ ಪೊಲೀಸರಿಗೆ ದೂರು

Taluknewsmedia.com

ಆರ್.ಟಿ.ನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಗಂಡನಿಂದ ಮಾನಸಿಕ ಹಲ್ಲೆ ಹಾಗೂ ಜೀವ ಬೆದರಿಕೆ ಎದುರಿಸಿದ ಹಿನ್ನೆಲೆಯಲ್ಲಿ ಪೊಲೀಸಠಾಣೆಯಲ್ಲಿ ಮತ್ತೆ ದೂರು ದಾಖಲಿಸಿದ್ದಾರೆ.ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಸರಸ್ವತಿಯವರು ಈ ಹಿಂದೆ ತಮ್ಮ ಪತಿಯ ವಿರುದ್ಧ ದಾಂಪತ್ಯ ಜೀವನದಲ್ಲಿ ಕಿರುಕುಳ ನೀಡುತ್ತಿದ್ದ ಕಾರಣ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ನ್ಯಾಯಾಲಯದಿಂದ ರಕ್ಷಣೆ ಆದೇಶವೂ ಪಡೆಯಲಾಗಿತ್ತು.ಆದರೆ ಆರೋಪಿಯಾಗಿರುವ ಗಂಡನು ದಿನಾಂಕ 21/06/2025 ರಂದು ಸಂಜೆ ಸುಮಾರು 4:00 ಗಂಟೆಗೆ ಸರಸ್ವತಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ತಮ್ಮ ವಿರುದ್ಧ ದಾಖಲಾಗಿರುವ ಕೇಸುಗಳನ್ನು ವಾಪಾಸು ಪಡೆಯುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ನಿಗೆ ಕೈಗಳಿಂದ ಹಲ್ಲೆ ನಡೆಸಿ, ಕುತ್ತಿಗೆಯಿಂದ ಹಿಡಿದು ಎಳೆದಾಡಿದ ಎನ್ನಲಾಗಿದೆ.ಈ ವೇಳೆ ಘಟನೆಯನ್ನು ತಪ್ಪಿಸಲು ಮುಂದಾದ ಸರಸ್ವತಿಯವರ ಮಗಳ ಮೇಲೂ ಆರೋಪಿಯು ಹಲ್ಲೆ ನಡೆಸಿದನು. ಬಳಿಕ, ಪ್ರಕರಣಗಳನ್ನು ವಾಪಾಸು ಪಡೆಯದಿದ್ದರೆ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡುವಂತೆ life threat ನೀಡಿದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪೀಡಿತ ಮಹಿಳೆಯು ಈಗ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಮ್ಮೆ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Related posts