ಬಿ.ಸಿ.ಎ ವಿದ್ಯಾರ್ಥಿನಿ ಕಾಣೆ – ತಾಯಿ ನೀಡಿದ ದೂರು
ನಗರದ ನಿವಾಸಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿರುವ ಮಹಿಳೆಯವರ ಮಗಳು, 19 ವರ್ಷದ ಅಕ್ಷಯ ಎಂ.ಎಸ್., ಕಳೆದ ಏಪ್ರಿಲ್ 9ರಂದು ಬೆಳಿಗ್ಗೆ 7:30ಕ್ಕೆ ಮನೆಯಿಂದ ಕಾಲೇಜಿಗೆ ಹೋಗಿದ್ದಾಗಿ ಹೇಳಿ ಹೊರಟ ಬಳಿಕ ಮರಳಿ ವಾಪಸ್ಸಾಗದೆ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಅಕ್ಷಯ, ಬೆಂಗಳೂರಿನ ಡಿಗ್ರಿ ಕಾಲೇಜೊಂದರಲ್ಲಿ ಬಿ.ಸಿ.ಎ (ಪ್ರಥಮ ವರ್ಷ) ವಿದ್ಯಾರ್ಥಿನಿಯಾಗಿದ್ದು, ತಾಯಿ ಬೆಳಿಗ್ಗೆ ಕೆಲಸಕ್ಕೆ ಹೋದ ಬಳಿಕ ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದು ನೋಡಿದಾಗ ಮಗಳು ಮನೆಯಲ್ಲಿರಲಿಲ್ಲ. ಕೂಡಲೇ ಫೋನ್ ಕರೆ ಮಾಡಿದಾಗ, ಆಕೆಯ ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ.
ಅಕ್ಷಯ ರವರ ತಾಯಿ ಪಕ್ಕದ ಅಂಗಡಿಗಳು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಗದೆ, ಆತಂಕಗೊಂಡು ಕೊನೆಗೆ ಪೊಲೀಸರ ಮೊರೆಹೋದರು. ತಾಯಿ ನೀಡಿದ ದೂರಿನಂತೆ, ಅಕ್ಷಯ ಆಗಾಗ ಸ್ನೇಹಿತೆಯ ಮನೆಯಲ್ಲಿ ಉಳಿದುಮರಳಿ ಮನೆಗೆ ಬರುವ ಪ್ರವೃತ್ತಿ ಹೊಂದಿದ್ದರೂ ಈ ಬಾರಿ ಹಲವು ದಿನಗಳಿಂದ ಮರಳಿ ಬಾರದಿರುವುದು ಚಿಂತೆಗೆ ಕಾರಣವಾಗಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಪ್ರಾರಂಭಿಸಲಾಗಿದೆ. ಪೊಲೀಸರು ಸಾರ್ವಜನಿಕರಲ್ಲಿ, ಅಕ್ಷಯ ಎಂ.ಎಸ್. ಕುರಿತು ಯಾವುದೇ ಮಾಹಿತಿ ದೊರೆತರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

