ಸುದ್ದಿ 

ಜಮೀನಿನಲ್ಲಿ ಜೆಸಿಬಿ ಕೆಲಸದ ವೇಳೆಯಲ್ಲಿ ದಾಳಿ – ಹಲವು ಮಂದಿಗೆ ತೀವ್ರ ಗಾಯ

Taluknewsmedia.com

ಜಮೀನಿನಲ್ಲಿ ನಡೆಯುತ್ತಿದ್ದ leveling ಕೆಲಸದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ತೀವ್ರ ಘರ್ಷಣೆ ಉಂಟಾಗಿ, ಎಂಟಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

ಶ್ರೀಮತಿ ಕಾರ್ತಿಕವೇಣಿ ಕೊಂ ಶ್ರೀಧರ್ ರವರು ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಜಮೀನಿನಲ್ಲಿ ಜೆಸಿಬಿ ಮೂಲಕ ಸಮತಟ್ಟು ಮಾಡುವ ಕೆಲಸವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಸ್ಥಳಕ್ಕೆ ಬಂದು, ಕಾಮಗಾರಿ ಪ್ರಶ್ನಿಸಿದಾಗ ತೀವ್ರ ಮಾತಿನ ಚಕಮಕಿ ಉಂಟಾಗಿ, ಹಲ್ಲೆಗೆ ತಿರುಗಿತು.

ಆರೋಪಿಗಳಾದ ಭರತ್, ಹರೀಶ್, ರಾಜು ಅಲಿಯಾಸ್ ಗಾರೆ ರಾಜು ಹಾಗೂ ಇತರರು ಸೇರಿ, ಕಾರ್ತಿಕವೇಣಿ ಅವರ ಕುಟುಂಬದವರಾದ ಪ್ರಸಾದ್, ಮುರಳಿ, ಕವಿತಾ, ವಿಜಯ್, ಶ್ರೀನಾಥ್, ಜಯಮ್ಮ ಮತ್ತು ದರ್ಶನ್‌ ರವರಿಗೆ ಕಬ್ಬಿಣದ ರಾಡು, ಕಲ್ಲು ಹಾಗೂ ದೊಣ್ಣೆಗಳೊಂದಿಗೆ ದಾಳಿ ನಡೆಸಿದ್ದಾರೆ. ಘಟನೆ ವೇಳೆ ಅಪಶಬ್ದಗಳನ್ನೂ ಬಳಸಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರಸಾದ್ ಮತ್ತು ಮುರಳಿ ಅವರನ್ನು ತುರ್ತು ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆದಾರರು ಶ್ರೀಧರ್ ಅವರ ದ್ವಿಚಕ್ರ ವಾಹನ (ನಂ: ಕೆಎ 59 ಎಲ್ 1979) ನ್ನು ಸಹ ಜಖಂಗೊಳಿಸಿದ್ದಾರೆ ಎಂದು ದೂರಿದೆ.

ಇನ್ನು, ಘಟನೆ ಬಳಿಕ ಕಾರ್ತಿಕವೇಣಿ ಯವರ ಮೇಲೆ ಮತ್ತೆ ಭರತ್ ಎಂಬಾತ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದು, ಜೀವ ಬೆದರಿಕೆಯೂ ಹಾಕಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಹಿಂದೆಯೂ 31.03.2025 ರಂದು ಪ್ರಕರಣವೊಂದನ್ನು ದಾಕಲಾತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆದಿದೆ. ಆರೋಪಿಗಳ ವಿರುದ್ಧ IPCನ ಹಲವಾರು ವಿಧಿಗಳಡಿ ಕ್ರಮ ಜರುಗಿಸಲಾಗುತ್ತಿದೆ.

Related posts