ಜೆಪ್ಪೋ ಡೆಲಿವರಿ ಏಜೆಂಟ್ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ
ಬೆಂಗಳೂರು ನಗರದ ಒಬ್ಬ ಮಹಿಳೆ ತಮ್ಮ ಮನೆಗೆ ಜೇಪ್ಪೋ ಆರ್ಡರ್ ವಿತರಣೆಗೆ ಬಂದ ಡೆಲಿವರಿ ಏಜೆಂಟ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ದಾಖಲಿಸಿದ್ದಾರೆ. ಈ ಸಂಬಂಧ ಮಹಿಳೆ ಅವರು 27/06/2025 ರಂದು ಮಧ್ಯಾಹ್ನ 1:00 ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರು.
ದಿನಾಂಕ 27/06/2025 ರಂದು ಬೆಳಿಗ್ಗೆ 9:30ಕ್ಕೆ ಅವರು ಜೆಪ್ಪೋ ಆ್ಯಪ್ ಮೂಲಕ ಮಾಡಿದ ಆರ್ಡರ್ (Order ID: MMTRIBLASN5997) ವಿತರಣೆಗೆ ಡೆಲಿವರಿ ಏಜೆಂಟ್ ಅವಿನಾಶ್ ಸಾಹಿ ಎಂಬುವರು ಮನೆಗೆ ಬಂದಿದ್ದರು. ವಿತರಣೆ ಸಮಯದಲ್ಲಿ ಆರೋಪಿಯು ಅವಾಸ್ಯಕವಾಗಿ ಸ್ಪರ್ಶಿಸಿ, ಅಸಭ್ಯವಾಗಿ ವರ್ತನೆ ತೋರಿದ್ದಾನೆ ಎಂಬುದು ದೂರಿನ ಸಾರಾಂಶ.
ಈ ಘಟನೆಯು ಮುಸ್ಕಾನ್ ಮುಸ್ಮಾನ್ಮ ಅವರ ಪತಿಗೆ ತೀವ್ರ ಆತಂಕ ಮತ್ತು ಮಾನಸಿಕ ತೊಂದರೆ ಉಂಟುಮಾಡಿದ್ದು, ಮಹಿಳೆ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಮಾನವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಆರಂಭಿಸಿದ್ದಾರೆ. ಆರೋಪಿಗೆ ನೋಟಿಸ್ ನೀಡಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ.

