ಕೆಂಪುದೊಮ್ಮಸಂದ್ರದಲ್ಲಿ 12 ವರ್ಷದ ಬಾಲಕಿ ಕಾಣೆ: ಪೋಷಕರಿಂದ ಪೊಲೀಸರಿಗೆ ದೂರು
ಆನೇಕಲ್, ಜುಲೈ 4, 2025: ಆನೇಕಲ್ ತಾಲ್ಲೂಕಿನ ಕೆಂಪುದೊಮ್ಮಸಂದ್ರ ಗ್ರಾಮದಲ್ಲಿ 12 ವರ್ಷದ ಬಾಲಕಿ ಕಾಜಲ್ ಕಾಣೆಯಾದ ಘಟನೆ ಸಂಬಂಧಿಸಿದಂತೆ ಅವರ ತಂದೆ ರಾಜು ಭಕ್ತಿ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕುಟುಂಬ ಸಮೇತ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ ವಾಸವಿದ್ದ ರಾಜು ಭಕ್ತಿ ತಮ್ಮ ಮಗಳ ನಾಪತ್ತೆ ಬಗ್ಗೆ ಶಂಕಿತ ಹಿನ್ನೆಲೆ ಬೆಳಗಿಸಿದ್ದಾರೆ.
ರಾಜು ಭಕ್ತಿ ಮೂಲತಃ ಅಸ್ಸಾಂ ರಾಜ್ಯದ ಸಿಲ್‌ಚರ್ ಜಿಲ್ಲೆಯ ದುವಾರ್ ಬನ್ ಗ್ರಾಮದವರು. ಆನೇಕಲ್ ತಾಲೂಕಿನ ಮಂಜುನಾಥರೆಡ್ಡಿಯವರ ತೋಟದ ಶೆಡ್ಡಿನಲ್ಲಿ ಪತ್ನಿ ಪೂಜಾ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು. ನಾಪತ್ತೆಯಾಗಿರುವ ಕಾಜಲ್ ಅವರ ಮೊಮ್ಮಗಳು, 12 ವರ್ಷ 6 ತಿಂಗಳ ವಯಸ್ಸಿನವಳಾಗಿದ್ದು, ಚಿಕ್ಕ ಮಗಳು ಪೂನಮ್ (11) ಕೂಡ ಅವರೊಂದಿಗೆ ವಾಸವಿದ್ದಳು.
ಜೂನ್ 29, ಭಾನುವಾರವಾದ್ದರಿಂದ ಕೆಲಸಕ್ಕೆ ರಜೆಯಾಗಿದ್ದ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆಗೆ ಕಾಜಲ್ ಮತ್ತು ಪೂನಮ್ ಪಕ್ಕದ ಮನೆಯ ಮಹಿಳೆಯರಾದ ಬಾಲಗೋವಿಂದನ ಪತ್ನಿ ಪೂನಮ್ ಹಾಗೂ ಚೋಟುವಿನ ಪತ್ನಿ ಸೀತಾ ಅವರೊಂದಿಗೆ ಹೊಸ ಬಟ್ಟೆ ತರಲು ಕೆಲಮಂಗಲಕ್ಕೆ ತೆರಳಿದ್ದರು. ರಾತ್ರಿ ಸುಮಾರು 9:30ರ ವೇಳೆಗೆ ಉಳಿದವರು ಮನೆಗೆ ಮರಳಿದರೂ ಕಾಜಲ್ ಮಾತ್ರ ಬಾರದ ಕಾರಣ ಪೋಷಕರಿಗೆ ಆತಂಕವಾಯಿತು.
ವಿಚಾರಿಸಿದಾಗ ಸಂಜೆ 8:30ರ ವೇಳೆಗೆ ಎಲ್ಲರೂ ಕೆಲಮಂಗಲದಿಂದ ಬಸ್ ಮೂಲಕ ಮರಳಿ ಮುತ್ತಗಟ್ಟಿ ದಿಣ್ಣೆಯಲ್ಲಿ ಇಳಿದು ನಡೆದುಕೊಂಡು ಬರುತ್ತಿದ್ದರು. ಕಾಜಲ್ ಹಿಂದಿನಿಂದ ಬರುತ್ತಿದ್ದಳೇನಷ್ಟೆ, ಆದರೆ ನ್ಯೂಬಾಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್ ಬಳಿ ತೆರಳಿದ ನಂತರ ಅಕಸ್ಮಾತ್ ಕಾಣೆಯಾಗಿದ್ದಾಳೆ ಎಂದು ತಿಳಿಸಲಾಗಿದೆ. ಆಗಿನಿಂದ ಹುಡುಕಾಟ ಮುಂದುವರಿದಿದ್ದರೂ ಈವರೆಗೆ ಆಕೆ ಪತ್ತೆಯಾಗಿಲ್ಲ.
ಕಾಣೆಯಾದ ಬಾಲಕಿ ಕುರಿತ ವಿವರಗಳು ಹೀಗಿವೆ:
ಹೆಸರು: ಕಾಜಲ್
ವಯಸ್ಸು: 12 ವರ್ಷ 6 ತಿಂಗಳು
ಚಹರೆ: ಕೋಲುಮುಖ, ಗೋಧಿ ಮೈಬಣ್ಣ, ಕಪ್ಪು ಕಣ್ಣು, ಕಪ್ಪು ಕೂದಲು, 4.5 ಅಡಿ ಎತ್ತರ
ಬಟ್ಟೆ ವಿವರ: ನೀಲಿ ಬಣ್ಣದ ಸೀರೆ ಧರಿಸಿದ್ದಳು
ಭಾಷೆ: ಹಿಂದಿ


