ಸುದ್ದಿ 

ಆನೇಕಲ್‌ನಲ್ಲಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಕಾಣೆಯಾಗಿರುವ ಘಟನೆ: ಹುಡುಕಾಟ ಜೋರಾಗಿದೆ

Taluknewsmedia.com

ಆನೇಕಲ್, ಜುಲೈ 4, 2025: ಆನೇಕಲ್ ಪಟ್ಟಣದ ಎ.ಕೆ. ಕಾಲೋನಿ, ಜೈಭೀಮ್ ನಗರದಲ್ಲಿರುವ ನಿವಾಸಿ ವೆಂಕಟೇಶ್ ಅವರ 17 ವರ್ಷದ ಮಗಳು ಭವ್ಯ ಜೂನ್ 30ರಂದು ಬೆಳಿಗ್ಗೆ ಮನೆಯಿಂದ ಹೊರಟ್ಟಿದ ಬಳಿಕ ಕಾಣೆಯಾಗಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೋಷಕರ ಮಾಹಿತಿ ಪ್ರಕಾರ, ಭವ್ಯ ಆನೇಕಲ್ ಅಕ್ಷಯ ಪಿಯು ಕಾಲೇಜಿನಲ್ಲಿ 1ನೇ ಪಿಯುಸಿ ವ್ಯಾಸಂಗಿಸುತ್ತಿದ್ದಳು. ದಿನಾಂಕ 30/06/2025 ರಂದು ಬೆಳಿಗ್ಗೆ 9:30 ಗಂಟೆಗೆ ತಂದೆ ವೆಂಕಟೇಶ್ ರವರು ದಿನನಿತ್ಯದ ರೀತಿಯಲ್ಲಿ ಮಗಳನ್ನು ಕಾಲೇಜಿಗೆ ಬಿಟ್ಟು ಬಂದು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅದೇ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಲೇಜು ಸಿಬ್ಬಂದಿಯಿಂದ ಮಗಳ ಪತ್ತೆಯಾಗಿಲ್ಲ ಎಂಬ ಮಾಹಿತಿಯನ್ನು ಪತ್ನಿಗೆ ದೂರವಾಣಿ ಮೂಲಕ ತಿಳಿಸಲಾಯಿತು.

ಈ ವಿಷಯ ತಿಳಿಯುತ್ತಿದ್ದಂತೆ, ಕುಟುಂಬಸ್ಥರು ಗಾಬರಿಗೊಂಡು ಆತ್ಮೀಯರು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರು. ಆದರೆ ಎಲ್ಲೆಡೆ ಹುಡುಕಿದರೂ ಭವ್ಯ ಬಗ್ಗೆ ಯಾವುದೇ ಮಾಹಿತಿ ಲಭಿಸದ ಕಾರಣ ಜುಲೈ 1 ರಂದು ಆನೇಕಲ್ ಠಾಣೆಗೆ ದೂರು ನೀಡಲಾಯಿತು.

ಕಾಣೆಯಾದ ಭವ್ಯ ವಿವರಣೆ ಹೀಗಿದೆ:

ಹೆಸರು: ಭವ್ಯ

ವಯಸ್ಸು: 17 ವರ್ಷ

ಹುಟ್ಟಿದ ದಿನಾಂಕ: 19/06/2008

ಎತ್ತರ: 4.5 ಅಡಿ

ಚಹರೆ: ಗುಂಡು ಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಮತ್ತು ಕಣ್ಣು, ನೀಳವಾದ ಮೂಗು

ಬಟ್ಟೆಗಳು: ಮೆರೂನ್ ಬಣ್ಣದ ಟಾಪ್, ಬಿಳಿ ಪ್ಯಾಂಟ್, ಚೂಡಿದಾರ

ಭಾಷಾ ಜ್ಞಾನ: ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ

ಆನೇಕಲ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹುಡುಕಾಟ ಆರಂಭಿಸಿದ್ದಾರೆ. ಈ ಯುವತಿಯ ಬಗ್ಗೆ ಯಾವುದೇ ಮಾಹಿತಿ ಇರುವವರು ಅಥವಾ ಅವರನ್ನು ನೋಡಿದವರು ತಕ್ಷಣವೇ ಆನೇಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Related posts