ಅಜಾಗರೂಕ ಚಾಲನೆಯಿಂದ ಆಟೋ ಚಾಲಕನಿಗೆ ಗಂಭೀರ ಗಾಯ: ಆರೋಪಿತ ಚಾಲಕ ಪರಾರಿ
ಆನೇಕಲ್, ಜುಲೈ 4, 2025 : ಆನೇಕಲ್ ತಾಲ್ಲೂಕಿನ ಹಾಲೇನಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಟೋ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಆರೋಪಿತ ಕಾರು ಚಾಲಕ ಅಪಘಾತ ಸಂಭವಿಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಶ್ರೀನಿವಾಸ್ ಬಿನ್ ಗುರುಸ್ವಾಮಿ (ಆಟೋ ಚಾಲಕ) ಅವರು ನೀಡಿದ ಮಾಹಿತಿಯಂತೆ, ದಿನಾಂಕ 30-06-2025 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ, ತಮ್ಮ ಟಿವಿಎಸ್ ಜುಪೀಟರ್ ಸ್ಕೂಟರ್ (ನಂ. TN 70 AS 2848) ನಲ್ಲಿ ಕರ್ಪೂರ ಗ್ರಾಮದಿಂದ ಆನೇಕಲ್ ಕಡೆಗೆ ಹಾಲೇನಹಳ್ಳಿ ರೈಲ್ವೆ ಗೇಟ್ ಬಳಿ ಸಾಗುತ್ತಿರುವಾಗ, KA 42 N 9384 ನಂ. ಕಾರು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಹೊಡೆದಿದೆ.
ಈ ಘಟನೆಯ ಪರಿಣಾಮವಾಗಿ ಸ್ಕೂಟರ್ ಹಾಗೂ ಕಾರು ಎರಡೂ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದ್ದು, ಶ್ರೀನಿವಾಸ್ ಅವರಿಗೆ ಬಲ ಕಾಲಿನ ಮೂಳೆಗೆ ಒಳಪೆಟ್ಟು ಹಾಗೂ ಬಲ ಕೈಗೆ ಗಾಯಗಳಾಗಿವೆ. ಸ್ಥಳೀಯ ಸ್ನೇಹಿತರು ಅವರನ್ನು ತಕ್ಷಣ ದಿನ್ನೂರು ಕ್ರಾಸ್‌ನ ಎಸ್.ಕೆ ಕ್ಲಿನಿಕ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಪ್ರಸ್ತುತ ಅವರು ಚೇತರಿಸಿಕೊಂಡು ತಡವಾಗಿ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಘಾತಕ್ಕಾಲಿದ KA 42 N 9384 ನಂ. ಕಾರು ಚಾಲಕ ಅಪಘಾತದ ನಂತರ ಕಾರು ನಿಲ್ಲಿಸದೇ ಪರಾರಿಯಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಸಂಬಂಧ ಸಂಚಾರಿ ಪೊಲೀಸರಿಂದ ಪ್ರಾಥಮಿಕ ವರದಿ ಸಿದ್ಧಪಡಿಸಲಾಗಿದ್ದು, ಆರೋಪಿತ ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ.

