ಸುದ್ದಿ 
Taluknewsmedia.com

ರಾಯಚೀನಹಳ್ಳಿ ಎಂ.ಡಿ.ಎಂ.ಎ ಮಾದಕ ವಸ್ತು ಮಾರಾಟ ದಂಧೆ ಪತ್ತೆ – ಒಬ್ಬ ಆರೋಪಿಯ ಬಂಧನ

ಬೆಂಗಳೂರು ಜುಲೈ 5 2025
ಸ್ಥಳ: ರಾಯಚೀನಹಳ್ಳಿ ಮುಖ್ಯ ರಸ್ತೆ, ಸಿಲ್ವರ್ ಡೋಮಿನ್ಸಿಲ್ ಅಪಾರ್ಟ್‌ಮೆಂಟ್ ಬಳಿ, ಬೆಂಗಳೂರು

ಬೆಂಗಳೂರು: ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕ ವಸ್ತುವಿನ ದಂಧೆ ಪತ್ತೆ ಹಚ್ಚಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗಿದ್ದ ಆನಂದ್ ಮನೋಜ್ ಎಂಬಾತನನ್ನು ಬಂಧಿಸಲಾಗಿದೆ.

ದಿನಾಂಕ 27/06/2025 ರಂದು ಬೆಳಿಗ್ಗೆ 08:00ರಿಂದ ರಾತ್ರಿ 09:45ರವರೆಗೆ ನಡೆದ ಕಾರ್ಯಾಚರಣೆಯಲ್ಲಿ, ಸಂಪಿಗೆಹಳ್ಳಿ ಪೋಲೀಸರು ಗುಪ್ತ ಮಾಹಿತಿಯನ್ನು ಆಧರಿಸಿ ಸ್ಥಳೀಯವಾಗಿ ದಾಳಿ ನಡೆಸಿದರು. ಆರೋಪಿ ಆನಂದ್ ತನ್ನ ಬಳಿಯಲ್ಲಿ 13.80 ಗ್ರಾಂ ತೂಕದ ಎಂ.ಡಿ.ಎಂ.ಎ ಅನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟುಕೊಂಡಿದ್ದು, ಅದನ್ನು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ ಉದ್ಯೋಗಿಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಸಂಪಿಗೆಹಳ್ಳಿ ಪೊಲೀಸರು ಆರೋಪಿಯಿಂದ ಮಾಹಿತಿ ಪಡೆದು ಸ್ಥಳವನ್ನು ಪರಿಶೀಲಿಸಿದಾಗ, ಪಕ್ಕದ ಎಳನೀರು ಮಾರಾಟದ ಸ್ಥಳದ ಬಳಿಯಲ್ಲಿಯೇ ಮಾದಕ ವಸ್ತು ಇಟ್ಟಿರುವುದು ದೃಢವಾಯಿತು. ತಕ್ಷಣವೇ ಪೊಲೀಸ್ ತಂಡ ಆ ವಸ್ತುವನ್ನು ವಶಕ್ಕೆ ಪಡೆದು ತೂಕ ಮಾಡಿದ್ದು, ಮೌಲ್ಯ ಸುಮಾರು ₹30,000 ಎಂದು ಅಂದಾಜಿಸಲಾಗಿದೆ.

ಆರೋಪಿ ವಿವರ:

ಹೆಸರು: ಆನಂದ್ ಮನೋಜ್

ವಯಸ್ಸು: 26 ವರ್ಷ

ವಾಸಸ್ಥಳ: ಬೇಗೂರು, ಬೆಂಗಳೂರು (ಹಳೆಯ ವಿಳಾಸ: ಮಲಪ್ಪುರಂ ಜಿಲ್ಲೆ, ಕೇರಳ)

ಈ ಪ್ರಕರಣದಲ್ಲಿ ಸಂಪಿಗೆಹಳ್ಳಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯ (NDPS Act) ಸೆಕ್ಷನ್ 8(ಸಿ), 22(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ಜೋರಾಗಿದೆ. ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts