ಸೈಟ್ ವಂಚನೆ, ಲಕ್ಷಾಂತರ ಹಣ ಪಡೆದು ಹಲ್ಲೆ: ದುಷ್ಟಯೋಜನೆಯ ತೋಟಿಲಲ್ಲಿ ದಂಪತಿ
ಬೆಂಗಳೂರು, ಜುಲೈ 5: 2025
ನಗರದ ಅಮೃತಹಳ್ಳಿಯಲ್ಲಿರುವ ಶ್ರೀನಿವಾಸ್ ಎಂಬವರ ಮನೆ ಬಳಿ ದಂಪತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆಯ ನಂತರ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ದಂಪತಿಯವರು ಅಮೃತಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಸೈಟ್ ಮಾರಾಟದ ಹೆಸರಿನಲ್ಲಿ ಭಾರೀ ಪ್ರಮಾಣದ ಹಣ ವಂಚನೆಗೊಂಡದ್ದು ಮತ್ತು ನಂತರ ದೌರ್ಜನ್ಯಕ್ಕೆ ಒಳಗಾಗಿರುವುದು ಉಲ್ಲೇಖಿಸಲಾಗಿದೆ.
ಪ್ರೇಮ್ ರಾಜನ್ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು ಹಾಗೂ ಅವರ ಹೆಂಡತಿ ಆಶಾಲತಾ ಅವರು ನಿವೃತ್ತ ಜೀವನ ನಡೆಸುತ್ತಿರುವ ದಂಪತಿ. ಬೆಂಗಳೂರು ನಗರದಲ್ಲಿ ವಾಸವಿದ್ದು, ಮುನಿರಾಜು ಎಂಬುವವರು ತಮಗೆ ಸೈಟ್ ತೋರಿಸಿ 10 ಲಕ್ಷ ರೂಪಾಯಿಗಳ ಮೊತ್ತವನ್ನು ಮುಂಗಡವಾಗಿ ಪಡೆದುಕೊಂಡು, ನಂತರ ಮತ್ತೊಮ್ಮೆ 10 ಲಕ್ಷ ರೂ ಪಡೆದುಕೊಂಡಿದ್ದಾರೆ. 2016 ರಲ್ಲಿ ತಮಗೆ ಸೈಟ್ ರಿಜಿಸ್ಟರ್ ಮಾಡಿಕೊಡಲಾಗಿದೆ ಎನ್ನಲಾದರೂ ಯಾವುದೇ ದಾಖಲೆಗಳನ್ನು ನೀಡದೆ ಬೇರೊಂದು ಸೈಟ್ ಮುಂದಿಟ್ಟಿದ್ದಾರೆ.
2021 ರಲ್ಲಿ ಸಹಕಾರನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮತ್ತೊಂದು ಸೈಟ್ ರಿಜಿಸ್ಟರ್ ಮಾಡಲಾಗಿದ್ದು, ಆ ಸಂದರ್ಭದಲ್ಲಿ ಶ್ರೀನಿವಾಸ್ ಎಂಬುವವರು ಕೂಡ ಭಾಗಿಯಾಗಿದ್ದರು. ಅವರು ಲೋನ್ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ಅವರ ಖಾತೆ, ಮತ್ತು ಕಿರಣ್, ಅರವಿಂದ್ ಎಂಬವರ ಖಾತೆಗಳಿಗೆ ಹಂತ ಹಂತವಾಗಿ 90 ಲಕ್ಷ ರೂಪಾಯಿಗಳವರೆಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ 30 ಲಕ್ಷ ನಗದು ಹಣವನ್ನು ಅಮೃತಹಳ್ಳಿಯ ಅಮೃತ ಬೇಕರಿ ಬಳಿ ಪಡೆದಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ಹಣ ಪಡೆದಿರುವ ಮುನಿರಾಜು ಮತ್ತು ಶ್ರೀನಿವಾಸ್ ಅವರು ಯಾವುದೇ ದಾಖಲೆಗಳು ಅಥವಾ ಸಾಲ ಮಂಜೂರಾತಿಗಳನ್ನು ನೀಡದೆ ವಿಳಂಬ ಮಾಡುತ್ತಾ ಬಂದಿದ್ದಾರೆ. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಅವರ ಮನೆಗೆ ತೆರಳಿದಾಗ, ಶ್ರೀನಿವಾಸ್ ಅವರ ಪುತ್ರ ಆಶಾಲತಾ ಅವರ ಕುತ್ತಿಗೆ ಹಿಡಿದು ತಳ್ಳಿದ ಹಾಗೂ ಹೊಡೆದ ಘಟನೆ ನಡೆದಿದೆ. ಮಧ್ಯೆ ಪ್ರವೇಶಿಸಿದ ಪತಿ ಮೇಲೆಯೂ ಹಲ್ಲೆ ನಡೆದಿದೆ.
ಇದನ್ನು ತಡೆಯಲು ಮುಂದಾದಾಗ ಶ್ರೀನಿವಾಸ್ ಅವರೇ ಕೂಡ ಪ್ರೇಮ್ ರಾಜನ್ ಅವರನ್ನು ಹೊಡೆದಿರುವುದು ದೂರಿನಲ್ಲಿ ಉಲ್ಲೇಖವಾಗಿದೆ. ಹಲ್�

