ಮಹಿಳೆಯ ಕತ್ತಿನಿಂದ ಚಿನ್ನದ ಮಾಂಗಲ್ಯ ಸರ ಕಿತ್ತೆ ಎಳೆದ ಅಪರಿಚಿತರು.. ಇಬ್ಬರು ಸ್ಕೂಟಿಯಲ್ಲಿ ಪರಾರಿ
ನಾಗಮಂಗಲ : ಅರೆಹಳ್ಳಿ–ಅಂಚಿಬೂವನಹಳ್ಳಿ ಮಾರ್ಗದ ಬಳಿ ನಡೆದ ದಿಟ್ಟ ಅಪಹರಣ ಪ್ರಕರಣದಲ್ಲಿ, ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಇಬ್ಬರು ಅಪರಿಚಿತರು ಕಿತ್ತೆ ಎಳೆದಿದ್ದು, ಸ್ಕೂಟಿಯಲ್ಲಿ ಪರಾರಿಯಾದ ಘಟನೆ ನಡೆದಿದೆ.ನಿಂಗಮ್ಮ ಅವರ ಮಾಹಿತಿ ಪ್ರಕಾರ, ಅವರು ಪ್ರತಿದಿನದಂತೆ ತಮ್ಮ ಮನೆಯ ಹತ್ತಿರ ಇರುವ ಕೊಟ್ಟಿಗೆಗೆ ಮೇವು ತುಂಬಿಕೊಂಡು ಹೋಗುತ್ತಿದ್ದಾಗ, ಈ ಘಟನೆ ನಡೆದಿದೆ. ಅವರು ತಲೆಯ ಮೇಲೆ ಮೇವು ತುಂಬಿದ ಮಂಕರಿಯನ್ನು ಹೊತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದಾಗ, ಅರೆಹಳ್ಳಿ ಕಡೆಯಿಂದ ಬಂದು ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆ ಬದಿ ನಿಲ್ಲಿಸಿ, ಅವರ ಪಕ್ಕದಲ್ಲಿ ನಿಂತು, ಒಬ್ಬನು ಸ್ಕೂಟಿಯಿಂದ ಇಳಿದು ನಿಂಗಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತೆಳೆದಿದ್ದಾರೆ.
ಅವರ ಕತ್ತಿನಲ್ಲಿ ಇದ್ದ ಚಿನ್ನದ ಸರದಲ್ಲಿ 40 ಗ್ರಾಂ ತೂಕದ ಮಾಂಗಲ್ಯ, 1 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳು, 1 ಗ್ರಾಂ ದೇವರ ತಾಳಿ ಮತ್ತು 3 ಗ್ರಾಂ ತಾಳಿಯಿಂದ ಕೂಡಿದ ಒಟ್ಟು 45 ಗ್ರಾಂ ಚಿನ್ನವಿತ್ತು. ಇದರ ಮೌಲ್ಯವನ್ನು ಸುಮಾರು ರೂ. 3,60,000 ಎಂದು ಅಂದಾಜಿಸಲಾಗಿದೆ.ನಿಂಗಮ್ಮ ಕಿರುಚಿದಾಗ ಹತ್ತಿರವಿದ್ದ ಸಕ್ಕರೆ ತಿಮ್ಮಣ್ಣನ ಮನೆಯವರು – ಸವಿತಾ ಮತ್ತು ಅವರ ಪುತ್ರ ಸ್ಥಳಕ್ಕೆ ಧಾವಿಸಿ ವಿಚಾರಿಸಿದರು. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೂ, ಆರೋಪಿಗಳು ಪತ್ತೆಯಾಗಲಿಲ್ಲ.ಈ ಕುರಿತು ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

