ಸುದ್ದಿ 

ಬೆಟ್ಟಹಳ್ಳಿ ಜಂಕ್ಷನ್ ಬಳಿ ಕಾರು ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

Taluknewsmedia.com


ಯಲಹಂಕ, ಜುಲೈ 6 2025


ಬೆಳಿಗ್ಗೆ ಸುಮಾರು 9:15ರಿಂದ 9:30ರ ಸಮಯದಲ್ಲಿ ಯಲಹಂಕ ತಾಲ್ಲೂಕಿನ ಬೆಟ್ಟಹಳ್ಳಿ ಜಂಕ್ಷನ್ ಬಳಿ ಸಂಭವಿಸಿದ ಅಪಘಾತದಲ್ಲಿ 47 ವರ್ಷದ ಮಹಿಳೆಗೆ ಗಂಭೀರ ಗಾಯಗಳಾಗಿವೆ.
ಶ್ರೀಮತಿ ನಾಗಮ್ಮ ಅವರು ತಮ್ಮ ಸ್ಕೂಟರ್ (ಎ-50-ಎಲ್‌ಎ 4547) ಅನ್ನು ಚಲಾಯಿಸುತ್ತಾ ಮನೆಯಿಂದ ಬೆಟ್ಟಹಳ್ಳಿ ಜಂಕ್ಷನ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹೆಚ್ಚಿನ ವೇಗದಲ್ಲಿ ಬಂದ ಕಾರು (ಕೆಎ-04-ಎಂ.ಟಿ.8128) ಅವರು ಸಾಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮವಾಗಿ ಅವರು ರಸ್ತೆ ಮೇಲೆ ಬಿದ್ದು ಎಡಗಜಲ ಬೆರಳುಗಳಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ನಂತರ ಅವರು ತಕ್ಷಣ ಸ್ಥಳದಲ್ಲಿ ಸ್ಕೂಟರ್ ಅನ್ನು ಬಿಟ್ಟು ದೇವನಹಳ್ಳಿಗೆ ಕೆಲಸಕ್ಕಂತೆ ಹೋಗಿದ್ದಾರೆ ಯಲಹಂಕ ಸಂಚಾರಿ ಪೊಲೀಸರಿಗೆ ದೂರು ನೀಡಲು ತೆರಳಿದರು. ಬಳಿಕ ಸಹೋದ್ಯೋಗಿಗಳ ಸಹಾಯದಿಂದ ಅವರನ್ನು ದೇವನಹಳ್ಳಿಯ ಮಾನಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತು ಯಲಹಂಕ ಸಂಸಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

Related posts