ಸುದ್ದಿ 

ಹೆಲ್ಮೆಟ್ ಇಲ್ಲದೆ ವೀಲಿಂಗ್ ಮಾಡಿದ 17 ವರ್ಷದ ಯುವಕನ ವಿರುದ್ಧ ಕಾನೂನು ಕ್ರಮ

Taluknewsmedia.com

ಬೆಂಗಳೂರು, ಜುಲೈ 8, 2025:
ನಗರದ ಬ್ಯಾಟರಾಯನಪುರ ಮುಖ್ಯರಸ್ತೆಯಲ್ಲಿ, ದಿನಾಂಕ 04 ಜುಲೈ 2025ರಂದು ರಾತ್ರಿ 10:30ರ ಸುಮಾರಿಗೆ, ಹೆಲ್ಮೆಟ್ ಧರಿಸದೇ ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಿದ್ದ ಸ್ಕೂಟರ್ ಸವಾರನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯರ ದೂರು ಹಾಗೂ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ನೀಡಿದ ಮಾಹಿತಿಯ ಆಧಾರವಾಗಿ, ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶಿನಗರ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಸ್ಕೂಟರ್ (ನೋಂದಣಿ ಸಂಖ್ಯೆ: KA-67-E-3315) ವಶಕ್ಕೆ ತೆಗೆದುಕೊಳ್ಳಲಾಯಿತು. ಮನೆ ಯಜಮಾನರು ಈ ಸ್ಕೂಟರ್ ತಮ್ಮದೇ ಎಂದು ತಿಳಿಸಿದ್ದು, ಅದನ್ನು ಅವರ 17 ವರ್ಷದ ಮಗ ಮೋಹಿತ್ ಎ ಬಿನ್ ಅರುಣ್ ಕುಮಾರ್ ದಿನಾಂಕ 04ರ ರಾತ್ರಿ ಚಲಾಯಿಸಿದ್ದನು ಎಂಬುದೂ ದೃಢಪಟ್ಟಿದೆ.

ಹೆಚ್.ಸಿ. 10107 ದಿನೇಶ್ ಕುಮಾರ್ ನೇತೃತ್ವದ ತಂಡ, ಬಾಲಕನನ್ನು ಆತನ ಮಾವನಾದ ಕುಮಾರ್ ರವರೊಂದಿಗೆ ಠಾಣೆಗೆ ಕರೆತಂದು ವಿಚಾರಣೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ ಮೋಹಿತ್ ಹೆಲ್ಮೆಟ್ ಇಲ್ಲದೇ ರಸ್ತೆ ಮಧ್ಯೆ ವೇಗವಾಗಿ ಸ್ಕೂಟರ್ ಚಲಾಯಿಸಿ, ಮಾನವ ಜೀವಕ್ಕೆ ಅಪಾಯ ಉಂಟುಮಾಡಿದುದಾಗಿ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ, ಬಾಲಕನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗುವಂತೆ ನಡೆದುಕೊಂಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಸ್ಕೂಟರ್ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related posts