ಆರ್.ಟಿ ನಗರದಲ್ಲಿ ಸಂಚಾರಕ್ಕೆ ಅಡಚಣೆ ಮಾಡಿದ ಗೂಡ್ಸ್ ವಾಹನ ಚಾಲಕನ ವಿರುದ್ಧ ಪ್ರಕರಣ
Taluknewsmedia.comಬೆಂಗಳೂರು :ನಗರದ ಆರ್.ಟಿ ನಗರದ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟುಮಾಡಿದ ಗೂಡ್ಸ್ ವಾಹನ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾಹಿತಿಯ ಪ್ರಕಾರ, ಸೆಪ್ಟಂಬರ 4 ರಂದು ಬೆಳಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಕೋಬ್ರಾ–01 ಗಸ್ತು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಪೊಲೀಸರು ಸಿ.ಬಿ.ಐ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ವಹಣೆಯಲ್ಲಿದ್ದರು. ಸಂಜೆ ಸುಮಾರು 6.00 ಗಂಟೆಯ ಸಮಯದಲ್ಲಿ ಪ್ಲಾರೆನ್ಸ್ ಶಾಲೆಯ ಎದುರು KA-05-AM-5926 ಸಂಖ್ಯೆಯ ಗೂಡ್ಸ್ ವಾಹನವನ್ನು ಚಾಲಕನು ಮುಖ್ಯರಸ್ತೆಯಲ್ಲೇ ನಿಲ್ಲಿಸಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾನೆ. ಪೊಲೀಸರು ವಾಹನದ ಹತ್ತಿರ ತೆರಳಿ ಚಾಲಕನ ವಿವರಗಳನ್ನು ವಿಚಾರಿಸಿದಾಗ ಆತನು ಶಿವಕುಮಾರ್ (20), ಉಮೇಶ್ ಕುಮಾರ್ ಪುತ್ರ, ರಂಜಿತಪುರ, ಸೀತಾಮಹಿ ಜಿಲ್ಲೆ, ಬಿಹಾರ್ ರಾಜ್ಯ ನಿವಾಸಿ ಎಂದು ತಿಳಿದುಬಂದಿದೆ. ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಆ ವಾಹನ ಚಾಲಕನ ವಿರುದ್ಧ ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರು ಪ್ರಕರಣ…
ಮುಂದೆ ಓದಿ..
