ಸುದ್ದಿ 

19 ವರ್ಷದ ಯುವತಿ ಪಾವನಿ ಕಾಣೆ: ಕುಟುಂಬದವರು ಆತಂಕದಲ್ಲಿ

Taluknewsmedia.com

ಬೆಂಗಳೂರು, ಜುಲೈ 7, 2025:


ಬೆಂಗಳೂರು ನಗರದ ಅಸ್ಪಥ್ ನಗರ್‌ನ ಅಮರಜ್ಯೋತಿ ಲೇಔಟ್‌ನ ನಿವಾಸಿ ನಾಗಮೂರ್ತಿ ಅವರ 19 ವರ್ಷದ ಮಗಳು ಕು|| ಪಾವನಿ ಕೆ ಎನ್ ಜುಲೈ 4ರಂದು ಮನೆಯಿಂದ ಹೊರಟು ಬಳಿಕ ವಾಪಸ್ ಬಾರದೆ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಪಾವನಿ ಅವರು ಆ ದಿನ ಬೆಳಿಗ್ಗೆ ಸುಮಾರು 11:00 ಗಂಟೆಗೆ “ಹೊರಗಡೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ನಿರ್ಗಮಿಸಿದ್ದು, ಸಂಜೆ ತನಕ ಕೂಡಾ ಮನೆಗೆ ವಾಪಸ್ ಬಾರದೇ ಇದ್ದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಅಪಾರ್ತ್‌ಮೆಂಟ್, ಪಕ್ಕದ ಬಡಾವಣೆ, ಸ್ನೇಹಿತರು, ಸಂಬಂಧಿಕರು ಎಲ್ಲೆಡೆ ಹುಡುಕಿದರೂ ಯಾವುದೇ ಸುಳಿವು ಸಿಗದೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದ ಯುವತಿಯ ವಿವರಗಳು ಹೀಗಿವೆ:

ಹೆಸರು: ಕು|| ಪಾವನಿ ಕೆ ಎನ್

ತಂದೆ: ನಾಗಮೂರ್ತಿ

ವಯಸ್ಸು: 19 ವರ್ಷ

ಉಡುಪು: ಬಿಳಿ ಬಣ್ಣದ ಟಿ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್

ಮೈಕಟ್ಟು: ಸಾಧಾರಣ

ಭಾಷೆ: ಕನ್ನಡ, ತೆಲುಗು, ಇಂಗ್ಲಿಷ್

ಗುರುತು: ಯಾವುದೇ ವಿಶೇಷ ಗುರುತು ಇಲ್ಲ

ಪಾವನಿ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ದಯವಿಟ್ಟು ತಕ್ಷಣ ಸಂಪಿಗೆಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕುಟುಂಬದವರು ಜನತೆಗೆ ಮನವಿ ಮಾಡಿದ್ದಾರೆ

Related posts