ಸುದ್ದಿ 

ಗೂಂಡಾ ದಾಳಿ – ಜಮೀನಿನಲ್ಲಿ ಭೀಕರ ಧ್ವಂಸ, ₹10 ಲಕ್ಷ ನಷ್ಟ

Taluknewsmedia.com

ಬೆಂಗಳೂರು, ಜುಲೈ 8,2025:
ನಗರದ ಹೊರವಲಯದ ಸರ್ವೆ ನಂ. 31/1 ಜಮೀನಿನಲ್ಲಿ ಜುಲೈ 3ರಂದು ರಾತ್ರಿ ನಡೆದ ಗೂಂಡಾ ದಾಳಿ ಭೀತಿ ಮೂಡಿಸಿದ್ದು, ಜಮೀನಿನ ಹಕ್ಕುದಾರರಿಗೆ ₹10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಎಸ್.ವಿ. ಮಾಲಾ, ಮಧುಕುಮಾರ್ ಮತ್ತು ನವೀನ್ ಕುಮಾರ್ ಎಂಬವರು ಮದ್ದೂರಿನ ಪೋಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಪ್ರಕಾರ, ಅವರುಗಳಿಂದ ತಮ್ಮ ಪೌತ್ರಿಕ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕಳೆದ 15 ವರ್ಷಗಳಿಂದ ನಿರಂತರವಾಗಿ ಅನಾಮಿಕ ವ್ಯಕ್ತಿಗಳಿಂದ ಕಿರುಕುಳ ಹಾಗೂ ದೌರ್ಜನ್ಯ ಎದುರಿಸುತ್ತಿದ್ದೇವೆ ಎಂದು ಅವರು ದೂರಿದ್ದಾರೆ.

ಮಧು ಕುಮಾರ್ ರವರ ಪ್ರಕಾರ, ದಿನಾಂಕ 03/07/2025 ರಂದು ರಾತ್ರಿ ಸುಮಾರು 10:30 ಗಂಟೆ ಸಮಯದಲ್ಲಿ ಸುಮಾರು 12 ರಿಂದ 15 ಮಂದಿ ದುಷ್ಕರ್ಮಿಗಳು ಮೂರು ಕಾರುಗಳಲ್ಲಿ ಆಗಮಿಸಿ, ಮಾರಕಾಸ್ತ್ರಗಳೊಂದಿಗೆ ಜಮೀನಿನ ಬಳಿಗೆ ಬಂದು ಭೀತಿಜನಕ ದೌರ್ಜನ್ಯ ನಡೆಸಿದರು. ಅವರು ಜಮೀನಿಗೆ ನುಗ್ಗಿ ಜೆಸಿಬಿ ಯಂತ್ರಗಳ ನೆರವಿನಿಂದ ಜಮೀನಿನಲ್ಲಿದ್ದ ಸೌಕರ್ಯಗಳನ್ನು ಧ್ವಂಸಗೊಳಿಸಿ ₹10 ಲಕ್ಷಕ್ಕೂ ಅಧಿಕ ನಷ್ಟ ಉಂಟುಮಾಡಿದ್ದಾರೆ.

ಈ ಕೃತ್ಯಕ್ಕೆ ಕಾರಣವೆಂದು “ಸಿಟಿ ಲೈಟ್ ಪ್ರೈವೇಟ್ ಲಿಮಿಟೆಡ್” ಸಂಸ್ಥೆಯ ಅರುಣ್ ಬಾಲಕೃಷ್ಣನ್ ಮತ್ತು ಅನಾಮಿಕ ಶ್ರೀವಾತ್ಸ ಎಂಬುವವರ ಹೆಸರು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ದಾಳಿಯ ನಂತರದ ದಿನ ಈ ವ್ಯಕ್ತಿಗಳು ಮತ್ತೆ ಜಮೀನಿನ ಬಳಿ ಬಂದು, ಹಕ್ಕುದಾರರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿರುವುದೂ ದೂರಿನಲ್ಲಿ ಉಲ್ಲೇಖವಾಗಿದೆ.

Related posts